ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಟೀಸರ್ ಇಂದು ಮುಂಜಾನೆ ರಿಲೀಸ್ ಆಗಿದೆ. ರಗಡ್ ಲುಕ್ನಲ್ಲಿ ಪ್ರಭಾಸ್ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪಾತ್ರ ಕೂಡ ಗಮನ ಸೆಳೆದಿದೆ. ಚಿತ್ರದಲ್ಲಿ ಬರುವ ಸೆಟ್ಗಳು ‘ಕೆಜಿಎಫ್’ ಸಿನಿಮಾವನ್ನು ನೆನೆಪಿಸುವಂತಿದೆ. ಮೇಕಿಂಗ್, ಮ್ಯೂಸಿಕ್ ಸಹ ಭರ್ಜರಿಯಾಗಿದೆ. ಟೀಸರ್ನಲ್ಲಿ ಪ್ರಭಾಸ್ ಹಾಗೂ ಪೃಥ್ವಿರಾಜ್ ಲುಕ್ ನೋಡುಗರಿಗೆ ರಸದೌತಣವನ್ನು ನೀಡಿದೆ.
ಈ ಸಿನಿಮಾವು ಒಂದು ಭರ್ಜರಿ ಆಕ್ಷನ್ ಎಂಟರ್ಟೇನರ್ ಆಗಿರಲಿದೆ ಎಂಬುದಕ್ಕೆ ಬಿಡುಗಡೆಯಾಗಿರುವ ಟೀಸರ್ ಸಾಕ್ಷಿಯಾಗಿದೆ
ಸಲಾರ್’ ಎರಡು ಭಾಗದಲ್ಲಿ ರಿಲೀಸ್ ಆಗಲಿದೆ ಎಂಬುದು ಈ ಮೊದಲೇ ಸುದ್ದಿ ಆಗಿತ್ತು. ಇದೀಗ ಅದು ಟೀಸರ್ನಲ್ಲಿ ಖಚಿತವಾಗಿದೆ. ಈ ಸಿನಿಮಾ ಎರಡು ಭಾಗದಲ್ಲಿ ಬರುತ್ತಿರುವ ವಿಚಾರವನ್ನು ತಂಡದವರು ಖಚಿತಪಡಿಸಿದ್ದಾರೆ. ಈ ಮೂಲಕ ದೊಡ್ಡ ಸೀಕ್ರೆಟ್ ರಿವೀಲ್ ಆಗಿದೆ. ಮೊದಲ ಪಾರ್ಟ್ಗೆ ‘ಸಲಾರ್: ಸೀಸ್ಫೈರ್’ ಎಂದು ಹೆಸರು ಇಡಲಾಗಿದೆ. ‘ಕೆಜಿಎಫ್’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಈಶ್ವರಿ ರಾವ್, ಮಧು ಗುರುಸ್ವಾಮಿ, ಶ್ರೀಯಾ ರೆಡ್ಡಿ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರದ ಸಾಹಸ ದೃಶ್ಯವನ್ನು ಹಾಲಿವುಡ್ ಮಟ್ಟದಲ್ಲಿ ನಿರ್ದೇಶಿಸುತ್ತಿದ್ದಾರೆ. ಆಕ್ಷನ್ ಸೀಕ್ವೆನ್ಸ್ಗಳನ್ನು ಹಾಲಿವುಡ್ ಸ್ಟಂಟ್ ಮಾಸ್ಟರ್ಗಳು ನೃತ್ಯ ಸಂಯೋಜನೆ ಮಾಡಿದ್ದಾರೆ.