ಬೆಂಗಳೂರು ;- ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಯ್ಯನಪಾಳ್ಯದಲ್ಲಿ ಪ್ರಥಮ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಜರುಗಿದೆ.
17 ವರ್ಷದ ಚಾರ್ಲಿ ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಹತ್ತನೇ ತರಗತಿ ಪಾಸಾಗಿ ತನ್ನ ಇಷ್ಟದ ಖಾಸಗಿ ಕಾಲೇಜಿಗೆ ಚಾರ್ಲಿ ಸೇರಿದ್ದ. ಆದರೆ ಓದು ತಲೆಗೆ ಹತ್ತದೇ ಆರು ತಿಂಗಳ ಹಿಂದೆ ಮೊದಲ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಇದರಿಂದ ನೊಂದಿದ್ದ ಚಾರ್ಲಿಯನ್ನು ಅಪ್ಪ ಮತ್ತು ಅಣ್ಣ ಧೈರ್ಯ ತುಂಬಿ ಟ್ಯೂಷನ್ಗೆ ಕಳುಹಿಸಿದ್ದರು. ಬಳಿಕ ಇತ್ತೀಚೆಗೆ ಮತ್ತೊಮ್ಮೆ ಸಪ್ಲಿಮೆಂಟ್ರಿ ಪರೀಕ್ಷೆ ಬರೆದಾಗಲೂ ಚಾರ್ಲಿ ಫೇಲ್ ಆಗಿದ್ದಾನೆ. ನಂತರ ತಾನು ಓದುತ್ತಿದ್ದ ಕಾಲೇಜಿನವರು ಬೇರೆ ಕಾಲೇಜಿಗೆ ಹೋಗಿ ಎಂದು ಟಿಸಿ ಕೊಡಲು ಮುಂದಾಗಿದ್ದಾರೆ. ಇಷ್ಟವಾದ ಕಾಲೇಜಲ್ಲಿ ಓದೋಕೆ ಆಗ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಆತ್ಮಹತ್ಯೆಗೆ ಶರಣಾಗಿದ್ದಾನೆ.