ಮಂಡ್ಯ :- ಮದ್ದೂರು ರೋಟರಿ ಸಂಸ್ಥೆಯ 2023 – 24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಂ.ಸಿ ಶಶಿಗೌಡ, ಕಾರ್ಯದರ್ಶಿಯಾಗಿ ಹೆಚ್.ಪಿ ಚನ್ನಂಕೆಗೌಡ ಬುಧವಾರ ಅಧಿಕಾರ ಸ್ವೀಕರಿಸಿದರು.
ಮದ್ದೂರು ಪಟ್ಟಣದ ಬಿಂದಾಸ್ ಪಾರ್ಟಿ ಹಾಲ್ ನಲ್ಲಿ ಬುಧವಾರ
ಮದ್ದೂರು ರೋಟರಿಯ 2023 – 24ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ರೋ. ಶಶಿಗೌಡ, ಕಾರ್ಯದರ್ಶಿಯಾಗಿ ರೋ.ಹೆಚ್.ಪಿ.ಚನ್ನಂಕೆಗೌಡ, ಖಜಾಂಚಿಯಾಗಿ ಹರೀಶ್ ಬಾಬು ಆಯ್ಕೆಗೊಂಡರು.
ಅಧಿಕಾರ ಸ್ವೀಕಾರ ಮಾಡಿದ ನಂತರ ಕಾರ್ಯಕ್ರಮ ಉದ್ದೇಶಿಸಿ ನೂತನ ಅಧ್ಯಕ್ಷ ಶಶಿಗೌಡ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವಾದಾಧ್ಯಂತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲ ಕಲ್ಪಿಸುವ ಸೇವೆ ಮಾಡುತ್ತಿದೆ. ಸಂಸ್ಥೆಯೂ ನನ್ನ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮೆಚ್ಚಿ ನನಗೆ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ಒಂದು ವರ್ಷಗಳ ಅವಧಿಗೆ ತಾವು ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಲಿದ್ದು,
ಗ್ರಾಮಾಂತರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆ, ಶುದ್ದ ಕುಡಿಯುವ ನೀರು ಘಟಕಗಳು, ಅಂಗವಿಕಲರಿಗೆ ವೀಲ್ ಚೇರ್, ಶೈಕ್ಷಣಿಕವಾಗಿ ಪ್ರತಿಭಾ ಪುರಸ್ಕಾರ ಇನ್ನು ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಲು ಈಗಾಗಲೇ ನಾನಾ ಯೋಜನೆಗಳನ್ನು ರೂಪಿಸಲಾಗಿದ್ದು, ಸಂಸ್ಥೆಗೆ ಯಾವುದೇ ರೀತಿಯ ಚ್ಯುತಿ ಬರದಂತೆ ಕೆಲಸ ಮಾಡಲಾಗುವುದು. ಹಾಗೂ ನನ್ನ ಅವಧಿಯಲ್ಲಿ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾಲೂಕಿನ ಜನರ ಸೇವೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅನಷ್ಠಾಪನಾಧಿಕಾರಿಯಾಗಿ ಆಗಮಿಸಿದ್ದ ರೋ. ಎನ್.ಎಸ್. ಮಹದೇವಪ್ರಸಾದ್ ಮಾತನಾಡಿ, ರೋಟರಿ ಸಂಸ್ಥೆಯೂ ನೊಂದವರು, ನಿರ್ಗತಿಕರು, ಬಡವರು ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹಾಯ ಮಾಡುವ ಸಂಸ್ಥೆಯಾಗಿದೆ. ವಿಶ್ವದೆಲ್ಲೆಡೆ ತನ್ನ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆಗಳಿಸಿದೆ. ನಮ್ಮ ರಾಜ್ಯದಲ್ಲಿಯೂ ಸರ್ಕಾರದ ಜೊತೆಗೂಡಿ ಸಾಮಾಜಿಕ ಸೇವೆಯನ್ನು ನೀಡುತ್ತಿದೆ. ಮದ್ದೂರು ತಾಲೂಕಿನಲ್ಲೂ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಂಡು ಸೇವೆ ಸಲ್ಲಿಸುತ್ತಿದೆ. ಪ್ರತಿ ವರ್ಷ ಆರೋಗ್ಯ ಇಲಾಖೆ ವತಿಯಿಂದ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಕೈಜೋಡಿಸುತ್ತಿದೆ.
ಪಲ್ಸ್ ಪೋಲಿಯೋ ಕಾರ್ಯಕ್ರಮ, ಬೃಹತ್ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಪಠ್ಯ ಪರಿಕರ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳು, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನ, ಹಾಗೂ ಇನ್ನೀತರ ಸೇವೆಗಳನ್ನು ಒದಗಿಸುತ್ತಿದ್ದು, ಸಂಸ್ಥೆಯ ಸದಸ್ಯರು ತಮ್ಮ ವೃತ್ತಿಪರ ಜ್ಞಾನ, ಪರಿಣಿತಿ ಮತ್ತು ಅನುಭವವನ್ನು ಹೆಚ್ಚಿನ ಪ್ರಮಾಣದಲ್ಲಿ ತಂದು ಮಾನವೀಯ ಯೋಜನೆಗಳ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ರೊ.ಕೆ.ಕುಮಾರರಾಜು (ವಲಯ ಪಾಲಕರು), ರೊ.ಭೈರೇಗೌಡ (ಜಿಲ್ಲಾ ಸಹಪಾಲಕರು) ಮಾಜಿ ಅಧ್ಯಕ್ಷರಾದ ರೋ.ಲಕ್ಷ್ಮಣ್ ಗೌಡ, ರೋ.ಸಿ ಪ್ರಕಾಶ್ ರೋ.ಹೊನ್ನೇಗೌಡ, ರೋ.ಕುಮಾರ್, ರೋ.ತಿಪ್ಪೂರ ರಾಜೇಶ್, ರೋ.ಅಪ್ಪಾಜಿ ಗೌಡ್ರು ರೋ.ರಾಮರಾಜು, ರೋ. ನಾಗರಾಜ್, ರೋ.ಬಾಲರಾಜ್, ರೋ.ನೈದಿಲೆ ಚಂದ್ರು, ರೋ.ಶಿವಣ್ಣ, ಹಾಗೂ ಎಲ್ಲಾ ರೋಟರಿ ಕುಟುಂಬದವರು ಹಾಜರಿದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ