ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಶೃಂಗೇರಿ ಕೊಪ್ಪ ತೀರ್ಥಹಳ್ಳಿ ಭಾಗದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ತುಂಗಾ ಡ್ಯಾಂ ನಿಂದ ನೀರನ್ನು ಹೊರಕ್ಕೆ ಬಿಡಲಾಗಿದೆ. ಬತ್ತಿ ಹೋಗಿದ್ದ ತುಂಗಾ ನದಿ ತುಂಬಿ ಹರಿಯುತ್ತಿದೆ. ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲೂ ವ್ಯಾಪಕವಾಗಿ ಮಳೆ ಸುರಿಯುತ್ತಿರುವುದರಿಂದ ಹೊಳ ಹರಿವು ಹೆಚ್ಚ ತೊಡಗಿದೆ. ಮಳೆಯಿಂದಾಗಿ ಜೋಗ ಜಲಪಾತದಜ ಸೌಂದರ್ಯ ಕಳೆಕಟ್ಟಿದೆ.
ಮಲೆನಾಡಿನಲ್ಲಿ ವರುಣನ ಅಬ್ಬರ ಜೋರಾಗಿದೆ. ತೀರ್ಥಹಳ್ಳಿ ಹೊಸನಗರ ಸಾಗಲ ಸೊರಬ ಶಿಕಾರಿಪುರ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಾಂದಾಗಿ ಜಿಲ್ಲೆಯ ಕಿರಿದಾದ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದ್ದು ಡ್ಯಾಂ ನ ಎರಡು ಕ್ರೆಸ್ಟ್ ಗೇಟ್ ಗಳಿಂದ 7500 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಬತ್ತಿ ಬರಿದಾಗಿದ್ದ ತುಂಗಾ ನದಿಗೆ ಹೊಸ ನೀರು ಹರಿದು ಬರುತ್ತಿದ್ದು, ಪಾಚಿಗಟ್ಟಿದ್ದ ತುಂಗಾ ನದಿ ಶುದ್ದವಾಗಿ ಹರಿಯುವಂತಾಗಿದೆ.
ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಲಿಂಗನಮಕ್ಕಿಂ ಡ್ಯಾಂ ಒಂದೇ ದಿನದಲ್ಲಿ ಒಂದುವರೆ ಅಡಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 1819 ಅಡಿ ನೀರು ಸಂಗ್ರಹ ಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂ ನಲ್ಲಿ 1744.40 ಅಡಿ ನೀರು ಸಂಗ್ರಹಗೊಂಡಿದೆ. ಜಲಾಶಯಕ್ಕೆ 15,466ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಶರಾವತಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದ ಸೌಂದರ್ಯ ಕಳೆಕಟ್ಟಿದೆ. ನೈಜ ಸೌಂದರ್ಯಕ್ಕೆ ಜೋಗ ತೆರೆದು ಕೊಂಡಿದೆ.
ಮಾಣಿ ಡ್ಯಾಂ ಪಾತ್ರದಲ್ಲೂ ದಾರಾಕಾರವಾಗಿ ಮಳೆಯಾಗುತ್ತಿದೆ.ಗರಿಷ್ಠ 595 ಮೀಟರ್ ಸಾಮರ್ಥ್ಯ ಹೊಂದಿರುವ ಮಾಣಿ ಡ್ಯಾಂ ನಲ್ಲಿ 562.12 ಮೀಟರ್ ಮುರ ಸಂಗ್ರಹಗೊಂಡಿದೆ. ಜಲಾಶಯಕ್ಕೆ 1008 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಮಾಣಿ ಹುಲಿಕಲ್ ಯಡೂರು ಮಾಸ್ತಿಕಟ್ಟೆಯಲ್ಲಿ 150 ಮಿಲಿಮೀಟರ್ ಗೂ ಅದಿಕ ಮಳೆಯಾಗಿದೆ.
ಭದ್ರಾ ಯೋಜನಾ ಪ್ರದೇಶದಲ್ಲಿ ಕೂಡ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಗರಿಷ್ಠ 186 ಅಡಿ ನೀರು ಸಂಗ್ರಹ ಮಟ್ಟ ಹೊಂದಿರುವ ಭದ್ರಾ ಡ್ಯಾಂ ನಲ್ಲಿ 138 ಅಡಿ ನೀರು ಸಂಗ್ರಹಗೊಂಡಿದೆ. 3670 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಿಲ್ಲೆಯಲ್ಲ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳ ಕೆರೆಗಳು ಹೊಸನೀರು ಸೇರ್ಪಡೆಯಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯನ್ನು ಎಲ್ಲೋ ಅಲರ್ಟ್ ಆಗಿ ಘೋಷಿಸಲಾಗಿದೆ. ಯಾವುದೇ ಜೀವಹಾನಿ ಬೆಳೆಹಾನಿಯಾದ ಬಗ್ಗೆ ವರದಿಯಾಗಿಲ್ಲ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಮಕ್ಕಳು ಶಾಲಾ ಕಾಲೇಜುಗಳಿಗೆ ತೆರಳುವುದು ದುಸ್ತರವಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಜಿಲ್ಲಾಡಳಿತ ಹೆಚ್ಚು ಮಳೆ ಬೀಳುವ ತಾಲೂಕುಗಳಿಗೆ ರಜೆ ಘೋಷಿಸುವ ಸಾಧ್ಯತೆಗಳಿದೆ.