ಗುರುಗಾಂವ್: ಮನೆಮುಂದೆ ಕಾರು ನಿಲ್ಲಿಸಿ ಜೋಡಿಯೊಂದು ಸೆಕ್ಸ್ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ ಮಹಿಳೆಯ ಜೊತೆಗೂ ಅನುಚಿತವಾಗಿ ವರ್ತಿಸಿದ ಘಟನೆ ಬುಧವಾರ ಬೆಳಗ್ಗೆ 5 ಗಂಟೆಗೆ ಹರ್ಯಾಣದ ಗುರುಗಾಂವ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ಯಾರೆಂದು ನೋಡಲು ಮನೆಯಿಂದ ಹೊರಗೆ ಬಂದಿದ್ದರು. ಆಗ ಮನೆಮುಂದೆಯೇ ಕಾರು ನಿಲ್ಲಿಸಿ ಒಂದು ಜೋಡಿ ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದರು.
ಕಾರಿನಲ್ಲಿ ಪಕ್ಕದ್ಮನೆಯ 26 ವರ್ಷದ ಯುವತಿ ಇದ್ದು, ಮಹಿಳೆ ಮೊದಲು ಆಕೆಯನ್ನು ಗುರುತಿಸಲಿಲ್ಲ. ನಂತರ ಅವರ ಹತ್ತಿರ ಹೋಗಿ ಅವರ ಹೆಸರನ್ನು ಕೇಳಿದ್ದಾರೆ. ಆದರೆ ಈ ಜೋಡಿ 52 ವರ್ಷದ ಮಹಿಳೆಯನ್ನು ನಿರ್ಲಕ್ಷಿಸಿದ್ದರು. ಜೋಡಿ ಯಾವುದೇ ಪ್ರತಿಕ್ರಿಯೇ ನೀಡದೇ ಇದ್ದಾಗ ಮಹಿಳೆ ಮತ್ತೆ ಅವರ ಹೆಸರನ್ನು ಕೇಳಿದ್ದಾರೆ. ಆಗ ಜೋಡಿ ಮಹಿಳೆಯನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ನೀನು ನಮ್ಮ ಜೊತೆ ಸೇರಿಕೋ. ನೀನು ನಮ್ಮ ಜೊತೆ ಸೇರಿ ಮಜಾ ಮಾಡು ಎಂದು ಯುವಕ ಆಕೆಯ ಕೈ ಹಿಡಿದು, ದುಪ್ಪಟ್ಟಾ ಎಳೆದಾಡಿದ್ದಾನೆ.
ಯುವಕ ಕೈ ಹಿಡಿಯುತ್ತಿದ್ದಂತೆ ಮಹಿಳೆ ಜೋರಾಗಿ ಕಿರುಚಿ ಅಕ್ಕಪಕ್ಕದ ಮನೆಯವರನ್ನು ಕರೆಸಿದ್ದಾರೆ. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಕಾರಿನಲ್ಲೇ ಅವರಿಬ್ಬರನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಸಿಕ್ಕಿಹಾಕಿಕೊಂಡ 20 ವರ್ಷದ ಯುವಕ ನಜಫ್ ಗರ್ ಗೆ ಕಪಾಳಮೋಕ್ಷ ಮಾಡಿ ಆತನ ಮೇಲೆ ಐಪಿಸಿ ಸೆಕ್ಷನ್ 354(ಲೈಂಗಿಕ ಕಿರುಕುಳ) ಅಡಿಯಲ್ಲಿ ಹಿಂಸೆಯ ಕೇಸ್ ದಾಖಲಿಸಿದ್ದಾರೆ.
ಯುವಕ ಮತ್ತು ಯುವತಿಯನ್ನು ಬಂಧಿಸುವಾಗ ಇಬ್ಬರೂ ಕುಡಿದಿದ್ದರು. ಆ ನಶೆಯಲ್ಲಿ ಯುವತಿ ತನ್ನ ಮನೆ ಎಂದುಕೊಂಡು ಪಕ್ಕದ್ಮನೆಯ ಬಾಗಿಲನ್ನು ಬಡಿದಳು. ನಂತರ ಇಬ್ಬರೂ ಕಾರಿನತ್ತ ಹೋಗಿದ್ದಾರೆ. ಬಾಗಿಲು ಬಡಿದ ಶಬ್ಧಕ್ಕೆ ಆ ಮನೆಯಲ್ಲಿದ್ದ ಮಹಿಳೆ ಎಚ್ಚರಗೊಂಡು ಹೊರಬಂದು ನೋಡಿದ್ದಾರೆ. ಅಷ್ಟೇ ಅಲ್ಲದೇ ನಾವು ಸ್ಥಳಕ್ಕೆ ಆಗಮಿಸುವ ಮೊದಲೇ ಯುವತಿಯ ಪೋಷಕರು ಆ ಸ್ಥಳಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ಬಾಗಿಲು ತೆಗೆಯುತ್ತಿದ್ದಂತೆ ನನಗೆ ಅವರು ನಗ್ನವಾಗಿ ಕಾಣಿಸಿದ್ದರು. ನಾನು ಅವರನ್ನು ಪ್ರಶ್ನಿಸಿದ್ದಕ್ಕೆ ಯುವತಿ ನನ್ನನ್ನು ನಿಂದಿಸಿದ್ದಾಳೆ ಹಾಗೂ ಯುವಕ ನನ್ನ ಕೈ ಹಿಡಿದು ಕಾರಿನೊಳಗೆ ಎಳೆಯಲು ಪ್ರಯತ್ನಿಸಿದ್ದಾನೆ. ಆ ಕಾರಿನಲ್ಲಿ ಮದ್ಯದ ಬಾಟಲ್, ಚಿಪ್ಸ್ ಪ್ಯಾಕೆಟ್ ಹಾಗೂ ಕಾರ್ಡ್ಸ್ ಇತ್ತು ಎಂದು ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.