ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ (Karnataka Rains ) ಮಳೆಯ ಪರಿಣಾಮವಾಗಿ (Landslide) ಭೂ ಕುಸಿತಗೊಂಡಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ನೋಡು ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿಯಿತು ಬಾವಿ. ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಗೆ ಎಂಬಲ್ಲಿ ಘಟನೆ ನಡೆದಿದೆ.ನೋಡು ನೋಡುತ್ತಿದ್ದಂತೆ ಬಾವಿಯೂ ಸಹ ಪಾತಾಳಕ್ಕೆ ಕುಸಿದಿದೆ.
ಅಲ್ಲದೇ ಬಾವಿ ಪಕ್ಕದಲ್ಲಿದ್ದ ಮನೆಯು ಅಪಾಯದಲ್ಲಿದೆ. ಭೂಕುಸಿತದ ಪರಿಣಾಮವಾಗಿ ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯಲ್ಲಿ ಬಿರುಕು ಮೂಡಿದ್ದು, ಅಲ್ಲಿನ ಪರಿಸರದ ಜನರು ಆತಂತಕದಲ್ಲಿದ್ದಾರೆ. ತಕ್ಷಣ ಅಗ್ನಿಶಾಮಕ ದಳದಿಂದ ಮನೆ ಮಂದಿಯ ರಕ್ಷಣೆ ಕಾರ್ಯಾಚರಣೆಯಾಗಿದ್ದು, ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.