ತೆಲಂಗಾಣ: ಪಶ್ಚಿಮ ಬಂಗಾಳದ ಸಿಕಂದರಾಬಾದ್ ಮತ್ತು ಹೌರಾ ನಡುವೆ ಓಡುತ್ತಿರುವ ಫಲಕ್ನುಮಾ ಎಕ್ಸ್ಪ್ರೆಸ್ ನ(Falaknuma Express Train) 3 ಬೋಗಿಗಳಿಗೆ ಶುಕ್ರವಾರ ತೆಲಂಗಾಣದ ಯಾದಾದ್ರಿ-ಭುವನಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.
ಬ್ಯಾಟರಿಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದ ಇದು ಸಂಭವಿಸಿದೆ ಎಂದು ವರದಿಯಾಗಿದೆ. ಒಂದು ಕೋಚ್ನಿಂದ ಹೊಗೆ ಮತ್ತು ಬೆಂಕಿ ಹೊರಹೊಮ್ಮಿತು ಈ ವೇಳೆ ಇನ್ನೊಂದಕ್ಕೆ ಹರಡಿತು. ಇದರಿಂದ ಅಕ್ಕಪಕ್ಕದ ಬೋಗಿಗಳಲ್ಲಿದ್ದ ಹಲವಾರು ಪ್ರಯಾಣಿಕರು ಭಯಭೀತರಾಗಿ ರೈಲಿನಿಂದ ಸುರಕ್ಷಿತವಾಗಿ ಹೊರಬಂದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ನಂತರ, ಬೋಗಿಗಳನ್ನು ಬೇರ್ಪಡಿಸಿ ಸುರಕ್ಷತಾ ತಪಾಸಣೆಯನ್ನು ಖಾತ್ರಿಪಡಿಸಿದ ನಂತರ, ಅಧಿಕಾರಿಗಳು ರೈಲನ್ನು ಚಲಾವಣೆಗೆ ಫ್ಲ್ಯಾಗ್ ಆಫ್ ಮಾಡಿದರು.
ಚಾರ್ಜಿಂಗ್ ಪಾಯಿಂಟ್ ಬಳಿ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರೈಲ್ವೆಯ DM ಗೆ ಒಂದು ಇಂಗ್ಲೀಷಿನಲ್ಲಿ ಪತ್ರ ಕಳುಹಿಸಲಾಗಿತ್ತು. ಆದ್ರೆ ಯಾರೋ ಉದ್ದೇಶಪೂರ್ವಕವಾಗಿ ಬರೆದಿರಬೇಕು ಎಂದು ಭಾವಿಸಿ ಅಧಿಕಾರಿಗಳು ಸಹ ಗಮನ ಹರಿಸಲಿಲ್ಲ. ಇದೀಗ ಅದು ನಿಜವಾಗಿದ್ದು ಫಲಕ್ನುಮಾ ಎಕ್ಸ್ಪ್ರೆಸ್ಗೆ ಬೆಂಕಿ ತಗುಲಿ 3 ಬೋಗಿಗಳು ಸುಟ್ಟು ಕರಕಲಾಗಿವೆ.