ಬೆಂಗಳೂರು: ರಾಜ್ಯ ಸರ್ಕಾರ ಮಂಡನೆ ಮಾಡಿದ ಬಜೆಟ್ ಅತ್ಯಂತ ಬೋಗಸ್ ಬಜೆಟ್ ಆಗಿದೆ ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಗುಡುಗಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಇರುವುದರಿಂದ ಇದೊಂದು ಬೋಗಸ್ ಬಜೆಟ್ ಆಗಿದ್ದು ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಈ ಬಜೆಟ್ ನಲ್ಲಿ ಒತ್ತು ಕೊಟ್ಟಿಲ್ಲ. ಕಳೆದ ಚುನಾವಣೆ ವೇಳೆ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಸರಕಾರಿ ಹಣವನ್ನು ಅವೈಜ್ಞಾನಿಕವಾಗಿ ಬಳಸಿಕೊಂಡು , ಬರುವ ಲೋಕಸಭೆಯಲ್ಲಿ ಮತ ಪಡೆಯಲು ಯತ್ನಿಸಿರುವ ತಂತ್ರಗಾರಿಕೆಯ ಬಜೆಟ್ ಆಗಿದ್ದು ಈವರೆಗೆ ಘೋಷಿಸಿರುವಂತೆ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಿಕೊಳ್ಳಲು ಪರದಾಟ ನಡೆಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.