ಬೆಂಗಳೂರು ;- ಮಾಜಿ ಸಚಿವ ಆರ್.ಅಶೋಕ್ ಅವರು ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ಅನ್ನು ಟೀಕಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಾಲಾಯಕ್ ಬಜೆಟ್ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮಂಡಿಸಿದ ಆಯವ್ಯಯ ಸುಳ್ಳು, ಮೋಸ, ಮೇಕೇದಾಟಿಗೆ 10 ಸಾವಿರ, ಮಹದಾಯಿಗೆ 10 ಸಾವಿರ ಕೋಟಿ ಇಡ್ತೀನಿ ಅಂದ್ರು. ಆದರೆ ಇಡೀ ಆಯವ್ಯಯ ಪುಸ್ತಕ ನೋಡಿದರೆ ಎಲ್ಲೂ ಹಣ ಇಟ್ಟಿಲ್ಲ ಎಂದು ಕಿಡಿಕಾರಿದರು.
ಬೆಂಗಳೂರು ಅಭಿವೃದ್ಧಿಗೆ ಏನೂ ಇಟ್ಟಿಲ್ಲ. ಬೆಂಗಳೂರು ಅತಿ ಹೆಚ್ಚು ಟ್ಯಾಕ್ಸ್ ನೀಡುತ್ತೆ. ಈ ಸರ್ಕಾರ ಪೊಳ್ಳು ಭರವಸೆ ಜಾರಿಗೆ ತರಲು ಬಜೆಟ್ ಮಾಡಿದೆ ಬಿಟ್ರೆ ಏನೂ ಇಲ್ಲ. ನೀರಾವರಿ ಇಲಾಖೆಯಲ್ಲಿ ಬಿಜೆಪಿ ಮಾಡಿರೋ ಯೋಜನೆ ಜಾರಿಗೆ ತರಲು ಆರು ವರ್ಷ ಬೇಕು ಅನ್ನೋ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವಧಿಯಲ್ಲಿ ಇದ್ದ ಬಾಕಿ ಕಾಮಗಾರಿ ತೋರಿಸಿಲ್ಲ. ಅದೆಲ್ಲ ತೋರಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.