ಬೆಂಗಳೂರು ;- ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಪರಿಷ್ಕರಣಾ ಬಜೆಟ್. ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಸಾಧ್ಯವಿಲ್ಲ. ಈ ಬಜೆಟ್ನ್ನು ಎಲ್ಲರೂ ಒಪ್ಪುತ್ತಾರೆ. ವಿರೋಧ ಪಕ್ಷ ಟೀಕಿಸಬಹುದು. ಐದು ಭರವಸೆ ಈಡೇರಿಸಲು ಸಮಸ್ಯೆ ಆಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ಬಾರಿ ಸಿಎಂ ಆದ ಕುಮಾರಸ್ವಾಮಿ ಅವರು ಬಜೆಟ್ಗೆ ಬಂದಿಲ್ಲ.ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಅನೇಕ ಇಲಾಖೆಗಳಲ್ಲಿ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ನಂದಿನಿ ಬ್ರಾಂಡ್ ಮಾಡಲು ನಿರ್ಧರಿಸಿದ್ದೇವೆ. ನರೇಗಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಮುಂದುವರೆಸುವ ಬಗ್ಗೆಯೂ ಯೋಚಿಸಿದ್ದೇವೆ ಎಂದು ತಿಳಿಸಿದರು. ಇದು ಚೆಂಡು ಹೂ ಮುಡಿಸುವ ಬಜೆಟ್ ಅನ್ನೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದ ಸಭಾ ನಾಯಕರು ಬಜೆಟ್ನಲ್ಲಿ ಕೂರದೇ ಇರುವವರು ಬಜೆಟ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಅವರಿಗೆ ಮಾತನಾಡುವ ನೈತಿಕತೆ ಏನಿದೆ. ಅವರು ಬಜೆಟ್ ಸದನದಲ್ಲಿ ಕೂತು ಬಳಿಕ ಮಾತನಾಡಬೇಕಿತ್ತು. ಅವರ ಪ್ರತಿಕ್ರಿಯೆ ಹಾಕಲೇ ಬಾರದು. ಅವರು ಬಜೆಟ್ ಭಾಷಣ ಕೇಳಲು ಸದನಕ್ಕೆ ಬಂದಿಲ್ಲ. ಅದಕ್ಕೆ ನಗ ಬೇಕೋ ಅಳಬೇಕೋ ಎಂದು ಚಲುವರಾಯ ಸ್ವಾಮಿ ಟೀಕಿಸಿದರು.