ಬೆಂಗಳೂರು ;- ಸಂಚಾರಿ ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಶೇ. 50 ರಷ್ಟು ರಿಯಾಯ್ತಿ ನೀಡಿ ರಾಜ್ಯ ಸರ್ಕಾರ ಮತ್ತೆ ಆದೇಶ ಹೊರಡಿಸಿದ್ದು, ಇದರಿಂದ ಸವಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕಳೆದ ಎರಡು ದಿನದಲ್ಲಿ ಬರೋಬ್ಬರಿ 50 ಲಕ್ಷ ದಂಡ ಪಾವತಿಯಾಗಿದೆ. 15,980 ಕೇಸ್ಗಳು ಕ್ಲಿಯರ್ ಆಗಿದ್ದು, 50,71,850 ರೂ.ಗಳನ್ನು ವಾಹನ ಸವಾರರು ದಂಡದ ರೂಪದಲ್ಲಿ ಕಟ್ಟಿದ್ದಾರೆ.
ಫೆಬ್ರವರಿ ತಿಂಗಳವರೆಗೆ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಕ್ಕೆ ವಿಧಿಸಲಾಗಿರುವ ದಂಡವನ್ನು ಶೇಕಡಾ 50ರಷ್ಟು ರಿಯಾಯಿತಿ ದರದಲ್ಲಿ ಪಾವತಿ ಮಾಡಲು ಈ ವರ್ಷದ ಸೆಪ್ಟೆಂಬರ್ವರೆಗೂ ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಿ ಭಾರಿ ಮೊತ್ತದ ದಂಡ ಸಂಗ್ರಹವಾಗಿತ್ತು. ಮತ್ತೆ ಈಗ ಅದೇ ಮಾದರಿಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರವು ಅನುಸರಿಸಲು ಮುಂದಾಗಿದೆ. ಹೀಗಾಗಿಯೇ, ಮತ್ತೆ ರಿಯಾಯಿತಿ ಘೋಷಣೆ ಮಾಡಿದೆ.