ಚಿತ್ರದುರ್ಗ;- ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟಿದ್ದು ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಕೆಲವು ಸಂಗತಿಗಳನ್ನು ನಾನು ಹೇಳಲು ಆಗುವುದಿಲ್ಲ. ನನ್ನ ಬಳಿ ಉತ್ತರವೂ ಇಲ್ಲ. ಬಹಳ ಹುಡುಕಾಡಬೇಕಾದ ಸ್ಥಿತಿಯೂ ಇಲ್ಲ. ಬೇರೆನೋ ವಿಷಯ ಇರಬಹುದೇನೋ ನನಗೆ ಗೊತ್ತಿಲ್ಲ. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಷಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ವೀಕ್ಷಕರು ಬಂದು ವರದಿ ಪಡೆದುಕೊಂಡು ಹೋಗಿದ್ದಾರೆ.
ನಾನು ಗೋವಾ, ತಮಿಳುನಾಡು, ಮಹಾರಾಷ್ಟ್ರ ಉಸ್ತುವಾರಿ ಆಗಿರುವುದರಿಂದ ಇಲ್ಲಿ ಗಮನ ನೀಡಿಲ್ಲ. ವರಿಷ್ಠರು ಏನಾದರೂ ಕೇಳಿದರೆ ಮಾತ್ರ ಹೇಳುತ್ತೇನೆ. ಆದರೆ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಮಾಜಿ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್ ಸೇರಿದಂತೆ ಎಲ್ಲರಿಗೂ ಅಧ್ಯಕ್ಷರಾಗುವ ಅರ್ಹತೆಯಿದೆ. ಆದರೆ, ಸವಾಲಿದೆ. ಸಂಕಷ್ಟ ನಿಭಾ ಯಿಸುವ ಜವಾಬ್ದಾರಿ ಇದಾಗಿದೆ. ಅ ಧಿಕಾರವಲ್ಲ ಎಂದರು.