ಕಲಬುರಗಿ: ಕೆಲಸ ಯಾವುದೇ ಕಂಪನಿ ಬಂದು ಮಾಡಲಿ ಆದ್ರೆ ಕಾಮಗಾರಿ ಮಾನಿಟರ್ ಮಾಡೋ ವೇಳೆ ಕನ್ನಡಿಗರಿಗೆ ಆದ್ಯತೆ ಕೊಡಿ. ಇದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕೊಟ್ಟ ಸೂಚನೆ.
ಕಲಬುರಗಿಯ ಡಿಸಿ ಕಚೇರಿಯಲ್ಲಿ ಇವತ್ತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ಕೊಟ್ರು.ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಅಂದ್ರೆ ಪೋಲೀಸ್ ಇಲಾಖೆಯ ಸಭೆ ಹೊರತುಪಡಿಸಿ ಮೊದಲ ಮೀಟಿಂಗ್ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಹಂತದ ಬಗ್ಗೆ ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ಫೌಜಿಯಾ ತರುನಮ್ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.