ಬೆಂಗಳೂರು: ನಿರ್ಮಾಪಕ ಕುಮಾರ್ ರಿಂದ ಕಿಚ್ಚ ಸುದೀಪ್ ಅವರು ಅಡ್ವಾನ್ಸ್ ಪಡೆದುಕೊಂಡು ನಮಗೆ ಈಗ ಮೋಸ ಮಾಡಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದ್ದು ಈ ಆರೋಪಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್ ತಮ್ಮ ಮೇಲೆ ಆರೋಪ ಮಾಡಿದ ಕುಮಾರ್ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ನೋಟಿಸ್ ಸಹ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಿರ್ಮಾಪಕ ಎಮ್.ಎನ್. ಕುಮಾರ್ ಸುದ್ದಿಗೋಷ್ಠಿ ನಡೆಸಿ ಕಿಚ್ಚ ಸುದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಟ ಕಿಚ್ಚ ಸುದೀಪ್ ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಅಡ್ವಾನ್ಸ್ ಪಡೆದುಕೊಂಡಿರುವ ಸುದೀಪ್, ಈವರೆಗೂ ನಮಗೆ ಕಾಲ್ ಶೀಟ್ ಕೊಡದೇ ಆಟವಾಡಿಸುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕುಮಾರ್ ಸುದೀಪ್ ವಿರುದ್ಧ ಗರಂ ಆದರು.
‘ನಾನು ಮಾಧ್ಯಮದ ಮುಂದೆ ನ್ಯಾಯ ಕೇಳಿದೆ. ನಾನು ಹಣ ಕೊಟ್ಟು ಇಷ್ಟು ವರ್ಷ ಆಗಿದೆ ಸ್ಪಂದಿಸುತ್ತಿಲ್ಲ. ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಡಿ ಅಂತ ಕೇಳಿದ್ದೆ. ಈಗ ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ ಬಂದಿಲ್ಲ. ಅನೌನ್ ನಂಬರ್ ನಿಂದ ಬಂದಿದೆ. ಅಫೀಶಿಯಲ್ ಆಗಿ ಬರುವ ತನಕ ರಿಯಾಕ್ಟ್ ಮಾಡಲ್ಲ. ಎಂದರು
ಸುದೀಪ್ 45 ಸಿನೆಮಾ ಮಾಡಿದ್ದಾರೆ. ಅಷ್ಟು ಸಿನಿಮಾದ ಅಗ್ರಿಮೆಂಟ್ ಕೊಡೋಕೆ ಹೇಳಿ. ಸಿನಿಮಾ ನಡೆಯೋದು ನಂಬಿಕೆ ಮೇಲೆ. ಅದರಂತೆ ಹಣ ಕೊಟ್ಟಿದ್ದೇನೆ. 6 ವರ್ಷ ಆಗಿದೆ ಕಮಿಟ್ಮೆಂಟ್ ಆಗಿ. ವಿಕ್ರಾಂತ್ ರೋಣ ಬಳಿಕ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ರು ಮಾಡಲಿಲ್ಲ. ಆ ಕಡೆ ನಂದಕಿಶೋರ್ ‘ಮುತ್ತತ್ತಿ ಸತ್ಯರಾಮ’ ಟೈಟಲ್ ಗೊತ್ತಿಲ್ಲ ಅಂತಾರೆ. ಬಹಿರಂಗ ಚರ್ಚೆಗೆ ಬರಲಿ ಬೇಕಿದ್ದರೆ ಮಾನನಷ್ಟ ಮುಖದ್ದಮೆ ಎಷ್ಟು ಸಮಂಜಸ..? ಕಾನೂನು ಎಲ್ಲರಿಗೂ ಒಂದೇ’ ನಾನು ಕಾನೂನು ಸಮರ ಮಾಡ್ತೀನಿ ಎಂದರು.