ಚಿಕ್ಕಬಳ್ಳಾಪುರ: ಮಾಜಿ ಸಚಿವ ಕೆ. ಸುಧಾಕರ್ ಅವರ ಚಾಲೆಂಜ್ ಅನ್ನು ಶಾಸಕ ಪ್ರದೀಪ್ ಈಶ್ವರ್ ಅವರು ಸ್ವೀಕಾರ ಮಾಡಿ ಮತ್ತೆ ಅವರಿಗೆ ಮತ್ತೊಂದು ಚಾಲೆಂಜ್ ನೀಡಿದ್ದಾರೆ. ಅದು ಏನಂತೀರಾ ನೋಡೋಣ ಬನ್ನಿ..
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಪತ್ರ ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಮಾಡಿದ್ದರು ಹಾಗಾಗಿ ಅವರು ಶ್ರೀ ಭೋಗನಂಧೀಶ್ವರ ದೇವಾಲಯಕ್ಕೆ ಬಂದು ದೀಪ ಹಚ್ಚಲಿ ಅಂತ ಮಾಜಿ ಸಚಿವ ಸುಧಾಕರ್ ಸವಾಲು ಹಾಕಿದರು. ಈ ಸವಾಲಿಗೆ ಪ್ರತಿಕರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್ ನಾನು ಈ ಸವಾಲನ್ನ ಸ್ವೀಕರಿಸುತ್ತೇನೆ ಹಾಗೆ ಅವರು ಕೂಡ ನನ್ನ ಸವಾಲನ್ನ ಸ್ವೀಕರಿಸಲು ರೆಡಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಅಂತ ದೀಪ ಹಚ್ಚುವಂತೆ ಸವಾಲು ಹಾಕಿದ್ದಾರೆ. ಅವರು ದೀಪ ಹಚ್ಚೋದಾದರೆ ನಾನು ಸಹ ದೀಪ ಹಚ್ಚುತ್ತೇನೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಅಂತ ಸಾಂಗ್ ಹಾಕಿ ದೀಪ ಹಚ್ಚೋಣ ಎಂದು ವ್ಯಂಗ್ಯ ಮಾಡಿದ್ದಾರೆ.