ಬೆಂಗಳೂರು ;- ಗ್ಯಾರಂಟಿ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡ್ದಾರರಿಗೆ ಹಣ ನೀಡುವ ಹಿನ್ನಲೆ ಈ ತಿಂಗಳ 10ರ ಸಂಜೆ 05 ಗಂಟೆಗೆ ಹಣ ಹಾಕುವುದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಮುನಿಯಪ್ಪ ‘ನೇರವಾಗಿ ಅವರವರ ಖಾತೆಗಳಿಗೆ 15 ದಿನಗಳಲ್ಲಿ ಹಣ ಹಾಕುತ್ತೇವೆ. ಒಟ್ಟು 1 ಕೋಟಿ 29 ಲಕ್ಷ ಕಾರ್ಡ್ಗಳಿದ್ದು, 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ರೂ.ವರೆಗೂ ಹಣ ಬೇಕಾಗಲಿದೆ. ತೆಲಂಗಾಣ ಛತ್ತಿಸ್ಘಡದವರು ಅಕ್ಕಿ ನೀಡಲು ಒಪ್ಪಿದ್ದು ಸಂಪರ್ಕದಲ್ಲಿದ್ದಾರೆ. ಅವರಿಂದ ನಾವು ಅಕ್ಕಿಯನ್ನು ಖರೀದಿ ಮಾಡಿ ಆದಷ್ಟು ಬೇಗ ವಿತರಣೆ ಮಾಡುತ್ತೇವೆ’ ಎಂದಿದ್ದಾರೆ.