ನವದೆಹಲಿ;- ನನ್ನ ಭದ್ರತಾ ಸಿಬ್ಬಂದಿಗಳ ಅನುಮತಿ ಇಲ್ಲದ ಹಿನ್ನೆಲೆ ಕೆಟಿಎಂ ಬೈಕ್ ಬಳಸಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನನ್ನ ಬಳಿ ಕೆಟಿಎಂ390 ಬೈಕ್ ಇದೆ. ಆದರೆ ಅದನ್ನು ಓಡಿಸಲು ನನಗೆ ನನ್ನ ಭದ್ರತಾ ಸಿಬ್ಬಂದಿಗಳು ಅನುಮತಿಸದ ಕಾರಣ ಅದು ಬಳಕೆಯಾಗದೇ ನಿಂತಿದೆ ಎಂದರು.
ಇದೇ ವೇಳೆ ‘ಯಾವಾಗ ಮದುವೆಯಾಗುತ್ತೀರಾ’ ಎಂಬ ಪ್ರಶ್ನೆಗೆ ‘ನೋಡೋಣ’ ಎಂದು ಉತ್ತರಿಸಿದ ಅವರು ತಮ್ಮ ಮದುವೆbಬಗ್ಗೆ ಯಾವುದೇ ಹೆಚ್ಚಿನ ಮಾತುಗಳನ್ನಾಡಿಲ್ಲ. ಇತ್ತೀಚೆಗೆ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕೂಡ ‘ಇನ್ನೂ ಸಮಯವಿದೆ ಮದುವೆಯಾಗಿ’ ಎಂದು ರಾಹುಲ್ಗೆ ಸಲಹೆ ನೀಡಿದ್ದರು.