ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಇತ್ತೀಚೆಗೆ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ. ಬಾಲಿವುಡ್ ಚಿತ್ರರಂಗಕ್ಕೆ ಸಾಕಷ್ಟು ಸ್ಟಾರ್ ಕಿಡ್ ಗಳನ್ನ ಕರೆತಂದು ಸ್ಟಾರ್ ನಟ, ನಟಿಯರನ್ನಾಗಿ ಮಾಡಿರುವ ಕರಣ್ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ಚಿತ್ರಗಳ ನಿರ್ಮಾಣ ಹಾಗೂ ನಿರೂಪಣೆಯಲ್ಲೇ ಬ್ಯುಸಿಯಾಗಿದ್ದಾರೆ.
ಕರಣ್ ಜೋಹರ್ ವೈಯಕ್ತಿಕ ಜೀವನದಲ್ಲಿ ಕುರಿತು ಸಾಕಷ್ಟು ಊಹಾಪೋಹಗಳಿವೆ. ಆತ ಮದುವೆ ಮಾಡಿಕೊಂಡಿಲ್ಲ. ಸರೋಗಸಿ ವಿಧಾನದ ಮೂಲಕ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾರೆ. ಮಗನ ಹೆಸರು ಯಶ್, ಮಗಳ ಹೆಸರು ರೂಹಿ. ಈ ಮಕ್ಕಳ ತಾಯಿ ಯಾರು ಎಂಬುದು ತಿಳಿದಿಲ್ಲ. ಕರಣ್ ಜೋಹರ್ ಯಾಕೆ ಮದುವೆ ಮಾಡಿಕೊಳ್ಳಲಿಲ್ಲ? ಎನ್ನುವುದರ ಬಗ್ಗೆ ಸಾಕಷ್ಟು ಅನುಮಾನಗಳಿವೆ.
ಸದ್ಯ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಕೂ ನಂತರ ಥ್ರೆಡ್ಸ್ ಸೋಶಿಯಲ್ ಮೀಡಿಯಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಕೆಲ ಸೆಲೆಬ್ರೆಟಿಗಳು ಥ್ರೆಡ್ಸ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅದೇ ರೀತಿ ಕರಣ್ ಜೋಹರ್ ಕೂಡ ಅದಕ್ಕೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳ ಜೊತೆ ಚಾಟ್ ಮಾಡಿದ್ದಾರೆ. 10 ನಿಮಿಷಗಳ ಸಮಯ. ಏನಾದರೂ ಪ್ರಶ್ನೆ ಕೇಳಿ ಉತ್ತರಿಸುತ್ತೇನೆ ಎಂದಿದ್ದಾರೆ.
ಕರಣ್ ಜೋಹರ್ ಹೀಗೆ ಹೇಳುತ್ತಿದ್ದಂತೆ ನೆಟ್ಟಿಗನೊಬ್ಬ “ನೀವು ಸಲಿಂಗ ಕಾಮಿ ಅಲ್ವೇ? ಎಂದು ಬಹಿರಂಗವಾಗಿ ಕೇಳಿಬಿಟ್ಟಿದ್ದಾನೆ. ಅದಕ್ಕೆ ಕರಣ್ ಜೋಹರ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. “ನಿಮಗೆ ಆಸಕ್ತಿ ಇದೆಯೇ?” ಎಂದು ಆ ನೆಟ್ಟಿಗನಿಗೆ ಕರಣ್ ಮರುಪ್ರಶ್ನೆ ಹಾಕಿದ್ದಾರೆ. ಸದ್ಯ ಈ ಪ್ರಶ್ನೆಗೆ ಕರಣ್ ನೀಡಿರುವ ಉತ್ತರ ಅಚ್ಚರಿ ಮೂಡಿಸಿದೆ. ಅವರು ತಾವು ಸಲಿಂಗ ಕಾಮಿ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕರಣ್ ಜೋಹರ್ ಸದ್ಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಆಖ್ಷನ್ ಕಟ್ ಹೇಳುತ್ತಿದ್ದಾರೆ. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಲೀಡ್ ರೋಲ್ಗಳಲ್ಲಿ ನಟಿಸ್ತಿದ್ದು ಜುಲೈ 28ರಂದು ಸಿನಿಮಾ ತೆರೆಗೆ ಬರಲಿದೆ.