ಬೆಂಗಳೂರು: ಇಂದಿನಿಂದ ಬಜೆಟ್ ಮೇಲಿನ ಚರ್ಚೆಯೂ ಆರಂಭವಾಗ್ತಿದೆ ಆದ್ರೆ ವಿಪಕ್ಷ ನಾಯಕ ಆಯ್ಕೆ ಮಾತ್ರ ಆಗ್ತಿಲ್ಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಮಧ್ಯೆ ವಿಪಕ್ಷ ನಾಯಕನ ಸ್ಥಾನಕ್ಕೆ ಟಫ್ ಫೈಟ್ ನಡೆಯುತ್ತಿದ್ದು. ಕಳೆದ 4 ದಿನಗಳ ಹಿಂದೆ ನಡೆದ ವೀಕ್ಷಕರ ಅಭಿಪ್ರಾಯ ಸಂಗ್ರಹದಲ್ಲು ಮೂವರ ಪರ- ವಿರೋಧ ಮತಗಳು ಚಲಾವಣೆಯಾಗಿವೆ. ಮಾಜಿ ಸಿಎಂ ಬೊಮ್ಮಾಯಿಯನ್ನ ಆಯ್ಕೆ ಮಾಡಲು ಬಿಲ್ ಸಂತೋಷ್ ಒಪ್ತಿಲ್ಲ,
ಯತ್ನಾಳ್ ಆಯ್ಕೆಗೆ ಯಡಿಯೂರಪ್ಪ ಒಪ್ತಿಲ್ಲ. ಸುನೀಲ್ ಕುಮಾರ್ ಆಯ್ಕೆ ಮಾಡಲು ಬಿಎಸ್ವೈ, ಸಂತೋಷ್ ಇಬ್ಬರಿಗೂ ಒಪ್ತಿಲ್ಲ ಎನ್ನುವಂತಾಗಿದೆ ಬಿಜೆಪಿ ಪರಿಸ್ಥಿತಿ. ಸದ್ಯ ವಿಪಕ್ಷ ನಾಯಕನ ಆಯ್ಕೆ ಚೆಂಡು ಬಿಜೆಪಿ ಹೈಕಮಾಂಡ್ ಅಂಗಳದಲ್ಲಿದ್ದು. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಆಸಕ್ತಿಯನ್ನೇ ತೋರ್ತಿಲ್ಲ. ರಾಜ್ಯದ ಬಣ ರಾಜಕೀಯದಿಂದ ಬೇಸತ್ತ ಕೇಸರಿ ಹೈಕಮಾಂಡ್ ಸದ್ಯಕ್ಕೆ ರಿಸ್ಕ್ ಬೇಡವೇ ಬೇಡ ಅನ್ನುತ್ತಿದ್ಯಂತೆ.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿದ ಬಿಜೆಪಿ MLC ರವಿಕುಮಾರ್ ನಮ್ಮ 66 ಶಾಸಕರು, 34 ವಿಧಾನಪರಿಷತ್ ಸದಸ್ಯರು ಎಲ್ಲರೂ ಚರ್ಚೆ ಮಾಡಿದ್ದಾರೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬಿಜೆಪಿ ಯಾವುದೇ ವಿಚಾರಗಳನ್ನ ಚರ್ಚೆ ಮಾಡಲು ಹಿಂದೇಟು ಹಾಕಲ್ಲ. ವಿಪಕ್ಷ ನಾಯಕ ನೇಮಕ ಸ್ವಲ್ಪ ತಡ ಆಗಿಲಿದೆ ಪ್ರತಿಯೊಬ್ಬ ಶಾಸಕರೂ ಕೂಡ ವಿಪಕ್ಷ ನಾಯಕನ ರೀತಿಯಲ್ಲೇ ಸದನದಲ್ಲಿ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತೇಪೆಹಚ್ಚುವ ಕೆಲಸ ಮಾಡಿದ್ರು.
ರಾಜ್ಯದ ಇತಿಹಾಸದಲ್ಲಿ ಮೊದಲ ಭಾರಿಗೆ ವಿಪಕ್ಷ ನಾಯಕನೇ ಇಲ್ಲದೆ ಅಧಿವೇಶನ ಮುಗಿದು ಹೋಗುವ ಲಕ್ಷಣಗಳು ಗೋಚರವಾಗ್ತಿವೆ. 3 ಬಣಗಳ ಕೋಲ್ಡ್ ವಾರ್ ಕೇಸರಿ ಹೈಕಮಾಂಡ್ ಅನ್ನೇ ಕಂಗೆಡುವಂತೆ ಮಾಡಿದೆ. ನಾಯಕರ ಮಧ್ಯೆ ಒಮ್ಮತ ಮೂಡದಿರೋದ್ರಿಂದ ರಿಸ್ಕ್ ಬೇಡವೇ ಬೇಡ ಸಾಮೂಹಿಕ ನಾಯಕತ್ವದಲ್ಲಿ ಅಧಿವೇಶನ ಮುಗಿಸೋದೆ ಸಲೀಸು ಎಂಬ ನಿರ್ಧಾರಕ್ಕೆ ಬಂದಿದ್ಯಂತೆ ಬಿಜೆಪಿ..