ಟೊಮ್ಯಾಟೊ ಅಂದ್ರೆ ಸಾಕು ಜನ ಕಣ್ ಕಣ್ ಬಿಟ್ಕೊಂಡು ನೋಡೊಹಾಗಾಗಿದೆ.ಯಾಕಂದ್ರೆ ಬೆಲೆ ಗಗನಕ್ಕೇರಿದೆ.ಆದ್ರೆ ಅದೇ ಟೊಮ್ಯಾಟೊ ತುಂಬಿದ ಬೊಲೆರೊ ವಾಹನವನ್ನೇ ಖದೀಮರು ಹೈಜಾಕ್ ಮಾಡಿದ್ದಾರೆ.ಲಕ್ಷಾಂತರ ಮೌಲ್ಯದ ಟೊಮ್ಯಾಟೊ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ.ಅದೇ ಕೇಸ್ ನ ಹಿಂದೆ ಪೊಲೀಸರು ಬಿದ್ದಿದ್ದು,ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹತ್ತಲ್ಲ..ಇಪ್ಪತ್ತಲ್ಲ..ಟೊಮ್ಯಾಟೊ ಬೆಲೆ ನೂರರ ಗಡಿ ದಾಟಿದೆ.ಬಡವರು ಹೇಗಪ್ಪ ಟೊಮ್ಯಾಟೊ ಖರೀದಿಸೋದು ಅನ್ನೋ ಚಿಂತೆಯಲ್ಲಿದ್ದಾರೆ.ಇದು ಗ್ರಾಹಕರ ಕಥೆಯಾದ್ರೆ ಲಕ್ಷ ಲಕ್ಷ ಬೆಲೆ ಟೊಮ್ಯಾಟೊ ಮಾಲನ್ನು ಹೇಗಪ್ಪಾ ಮಾರುಕಟ್ಟೆಗೆ ತಲುಪಿಸೋದು ಅನ್ನೋ ಚಿಂತೆ ವ್ಯಾಪಾರಸ್ಥನ್ನ ಕಾಡ್ತಿದೆ.
ಯಾಕಂದ್ರೆ ಲಕ್ಷ ಲಕ್ಷ ಬೆಲೆ ಬಾಳೊ ಟೊಮ್ಯಾಟೊ ತುಂಬಿದ್ದ ವಾಹನವನ್ನೇ ಖದೀಮರು ಹೈಜಾಕ್ ಮಾಡಿದ್ದಾರೆ. ಗಾಡಿ ಟಚ್ ಆಗಿದೆ ಎಂದು ಸುಳ್ಳು ಹೇಳಿದ ಮೂವರು ಆರೋಪಿಗಳು ಟೊಮೊಟೊ ತುಂಬಿದ್ದ ಬೊಲೋರೊ ವಾಹನವನ್ನ ಹೈಜಾಕ್ ಮಾಡಿದ್ದಾರೆ.ಜುಲೈ 9 ರಂದು ಈ ಘಟನೆ ನಡೆದಿದ್ದು ಈ ಸಂಬಂಧ ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ̤ ಹಿರಿಯೂರಿನ ರೈತ ಮಲ್ಲೇಶ್ ತಮ್ಮ ಜಮೀನಿನಲ್ಲಿ ಬೆಳೆದಿದ್ದ 210 ರಿಂದ 215 ಟ್ರೈ ಟೊಮೊಟೊ ಟ್ರೈನಲ್ಲಿ ತುಂಬಿಕೊಂಡು ಕೋಲಾರಕ್ಕೆ ಬೊಲೆರೊ ವಾಹನದಲ್ಲಿ ಹೋಗುತ್ತಿದ್ರು..
ಆರ್ ಎಂಸಿ ಯಾರ್ಡ್ ಬಳಿ ಬರ್ತಿದ್ದಂತೆ ಕಾರಿನಲ್ಲಿದ್ದ ಬಂದಿದ್ದ ಮೂವರು ಆಗಂತುಕರು ಗಾಡಿ ಟಚ್ ಆಗಿದೆ ಎಂದು ಬಲವಂತದಿಂದ ಗಾಡಿ ನಿಲ್ಲಿಸಿ ಚಾಲಕನಿಗೆ ಥಳಿಸಿ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ವಾಹನದಲ್ಲಿದ್ದ ರೈತನಿಗೆ ಆವಾಜ್ ಹಾಕಿ ಅಪಘಾತವೆಸಗಿದ್ದಕ್ಕಾಗಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣವಿಲ್ಲ ಎಂದಾಗ ಮೊಬೈಲ್ ನಲ್ಲಿದ್ದ ಹಣ ಟ್ರಾನ್ಸಫರ್ ಮಾಡುವಂತೆ ತಾಕೀತು ಮಾಡಿದ್ದಾರೆ. ನಂತರ ಟೊಮ್ಯಾಟೋ ನೋಡಿ ಇಡೀ ಗಾಡಿಯೇ ಹೈಜಾಕ್ ಮಾಡುವ ತಂತ್ರ ರೂಪಿಸಿದ್ದಾರೆ.
ಬಳಿಕ ಗಾಡಿಯಲ್ಲಿ ರೈತನನ್ನ ಕೂರಿಸಿಕೊಂಡು ಹೋಗಿದ್ದಾರೆ. ಡ್ರೈವರ್ ಸಮೇತ ಬೊಲೆರೋ ವಾಹನ ಕದ್ದೊಯ್ದಿದ್ದು ಚಿಕ್ಕಜಾಲ ಬಳಿ ಡ್ರೈವರ್ ನ ಬಿಟ್ಟು ಟೊಮ್ಯಾಟೊ ತುಂಬಿದ್ದ ವಾಹನ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನೆ ಸಂಬಂಧ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಪೊಲೀಸರು ಬಲೆ ಬೀಸಿರುವ ಆರ್ ಎಂ ಸಿ ಯಾರ್ಡ್ ಪೊಲೀಸರು ಹೈಜಾಕ್ ಆಗಿರುವ ವಾಹನ ಪತ್ತೆಗೆ ಬಲೆ ಬೀಸಿದ್ದಾರೆ.