ರಾಯಚೂರು:– ಇತ್ತೀಚೆಗೆ ಆರೋಗ್ಯದ ವಿಷಯದಲ್ಲಿ ನಾನಾ ಕಂಪನಿಗಳು ಔಷಧಿಗಳ ಬಗ್ಗೆ ಜಾಹೀರಾತುಗಳನ್ನು ಬಿಡುತ್ತಿವೆ. ದಪ್ಪ, ತೆಳ್ಳ, ಉದ್ದ, ಎತ್ತರ ಎಂದೆಲ್ಲ ಜನರನ್ನು ನಂಬಿಸಿ ಔಷಧಿ ಮಾರಾಟ ಮಾಡುವ ಕಾಯಕ ಮಾಡುತ್ತಿವೆ. ಹೀಗೆ ತೆಳ್ಳಗಾಗುವ ಪ್ರಾಡೆಕ್ಟ್ ನಂಬಿ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 26 ನೆ ವಾಡ್೯ನ ನಿವಾಸಿ ಅಯಾದ್ ಖಾತೂನ್ ಎಂಬ ಮಹಿಳೆಗೆ ಮೊಣಕಾಲು ನೋವಿಗೆ ಹರ್ಬಲ್ ಲೈಫ್ ಕಂಪನಿಯ ಔಷಧವನ್ನು ಸೇವಿಸಿದ್ದಾರೆ. ಹರ್ಬಲ್ ಲೈಫ್ ನ ಗುರುಬಸವ ಎಂಬುವವರು ಅಯಾದ್ ಖಾನ್ ಎಂಬ ಮಹಿಳೆಗೆ ಔಷಧ ನೀಡಿದ್ದಾರೆ.
ಆದರೆ, ಈ ಔಷಧಿ ಸೇವಿಸಿದ್ದ ಮಹಿಳೆಯ ವಾಂತಿಯಿಂದ ಒದ್ದಾಡಿದ್ದಾರೆ. ಕೂಡಲೇ ಕುಟುಂಬಸ್ಥರು ರಾಯಚೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಕಂಪನಿಯ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.