ಜೋಡಿಯೊಂದು ಸುರಿವ ಮಳೆಯಲ್ಲೇ (Rain)`ತುಮ್ ಸೆ ಹಿ’ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಜೋಡಿ, ವಾಹನಗಳು ಹಾದುಹೋಗುವಾಗ ರಸ್ತೆಯ ಪಕ್ಕದಲ್ಲಿ `ಜಬ್ ವಿ ಮೆಟ್’ ಚಿತ್ರದ ಹಾಡಿನ ದೃಶ್ಯವನ್ನು ಮರು ಸೃಷ್ಟಿಸಿದ್ದಾರೆ. ಡ್ಯಾನ್ಸ್ ಮಾಡುವಾಗ ಅವರ ಮುಖದಲ್ಲಿನ ನಗು ಸಾಮಾಜಿಕ ಜಾಲತಾಣದಲ್ಲಿ ಹಲವರನ್ನು ಸೆಳೆದಿದೆ.
ಶಾಹಿದ್ ಕಪೂರ್ (Shahid Kapoor) ಮತ್ತು ಕರೀನಾ ಕಪೂರ್ (Kareena Kapoor) ಅಭಿನಯದ `ಜಬ್ ವಿ ಮೆಟ್’ ಚಿತ್ರ ಕಳೆದ ಎರಡು ದಶಕದಲ್ಲಿ ಅತ್ಯಂತ ಜನಪ್ರಿಯ ರೊಮ್ಯಾಂಟಿಕ್ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ನಾಯಕಿ ಕರೀನಾ ಕಪೂರ್ ಅವರ ಪಾತ್ರವು ಬಹಳ ಜನಪ್ರಿಯವಾಗಿದೆ. ಈ ಸಿನಿಮಾ ಯುವ ಪೀಳಿಗೆಯ ಮೇಲೆ ಭಾರಿ ಪ್ರಭಾವ ಬೀರಿತ್ತು. ಚಿತ್ರದಲ್ಲಿ ಶಾಹಿದ್ ಕಪೂರ್ ಅವರ ಅಭಿನಯವನ್ನು ಅನೇಕ ಜನರು ಇಷ್ಟಪಟ್ಟಿದ್ದಾರೆ.
https://twitter.com/theLostFirsbee/status/1677296474521206784?ref_src=twsrc%5Etfw%7Ctwcamp%5Etweetembed%7Ctwterm%5E1677296474521206784%7Ctwgr%5Eb3f13909f795db79a845a13788efa552125609fb%7Ctwcon%5Es1_&ref_url=https%3A%2F%2Fpublictv.in%2Fcouple-recreates-tum-se-hi-song-in-heavy-rain-internet-reacts%2F
31 ಸೆಕೆಂಡುಗಳ ಈ ವೀಡಿಯೋವನ್ನು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಮೂರು ಸಾವಿರ ಲೈಕ್ ಪಡೆದಿದೆ. ಇದಕ್ಕೆ ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬ ಅವರಿಬ್ಬರೂ, ಶಾಶ್ವತವಾಗಿ ಹೀಗೆ ಇರಲಿ ಎಂದಿದ್ದಾರೆ. ಇನ್ನೊಬ್ಬ, ಸಾರ್ವಜನಿಕರಿಗೆ ತೊಂದರೆ ಕೊಡುವ ನಿಮ್ಮನ್ನು ಪೊಲೀಸರು ಬಂಧಿಸಿದರೆ ಎಲ್ಲಾ ಸರಿಯಾಗುತ್ತದೆ ಎಂದಿದ್ದಾರೆ. ಫುಟ್ಪಾತ್ಗಳು ಭಾರತದಲ್ಲಿ ಡ್ಯಾನ್ಸ್ ಸ್ಟೇಜ್ಗಳಾಗಿವೆ. ನಾನು ಈ ರೀತಿ ಮಳೆಯಲ್ಲಿ ಡ್ಯಾನ್ಸ್ ಮಾಡಿದರೆ ನನಗೆ ಜ್ವರವೇ ಬರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕ್ಯಾಮೆರಾಗಳಿಲ್ಲದೆ ಇದನ್ನೆಲ್ಲ ಮಾಡಿ ಎಂದು ಮತ್ತೊಬ್ಬ ವ್ಯಕ್ತಿ ಬರೆದಿದ್ದಾನೆ.