ಬೆಂಗಳೂರು ;– ಗೃಹ ಜ್ಯೋತಿ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬಿಳಗಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಬೆಸ್ಕಾಂ ಕಚೇರಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ ವ್ಯಾಪ್ತಿಯಲ್ಲಿಯೇ ಸುಮಾರು 40ಲಕ್ಷ ಜನ ಗ್ರಹಜ್ಯೋತಿ ಗೆ ನೋಂದಣಿ ಮಾಡಿದ್ದಾರೆ. ಎಲ್ಲಾ ಎಸ್ಕಾಂ ಗಳಿಂದ 1ಕೋಟಿ 3ಲಕ್ಷಕ್ಕೂ ಹೆಚ್ಚು ನೋಂದಣಿ ಆಗಿದೆ. ಗ್ರಾಮೀಣ ಭಾಗದಲ್ಲಿ ಅನಕ್ಷರಸ್ಥರು , ಗ್ರಹಜ್ಯೋತಿ ಯೋಜನಗೆ ನೋಂದಣಿ ಕಡಿಮೆ ಯಾಗಿದೆ. ಮುಂದಿನ ದಿನಗಳಲ್ಲಿ ಸಚಿವರ ಗಮನಕ್ಕೆ ಈವಿಚಾರವನ್ನ ತರಲಾಗುವುದು. ಗ್ರಹಜ್ಯೋತಿ ನೋಂದಣಿ ಶಿಭಿರಗಳನ್ನ ಗ್ರಾಮಿಣ ಭಾಗದಲ್ಲಿ ಮಾಡಲು ಚಿಂತನೆ ನಡೆದಿದೆ ಎಂದು ಬೆಸ್ಕಾಂ ಎಂಡಿ ಮಹಾಂತೇಶ್ ಬಿಳಗಿ ಮಾಹಿತಿ ನೀಡಿದ್ದಾರೆ.