ಬೆಂಗಳೂರು ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಖಾಕಿ ಗುಂಡು ಸದ್ದು ಮಾಡಿದೆ. ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಖತರ್ನಾಕ್ ರಾಬರ್ ಯಾಸರ್ ಎಂಬಾತನ ಕಾಲಿಗೆ ಶೇಷಾದ್ರಿಪುರಂ ಪೊಲೀಸರಿಂದ ಗುಂಡು ಹಾರಿಸಲಾಗಿದೆ.
ಸುಲ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿರುವ ಖತರ್ನಾಕ್ ಆಸಾಮಿ ಯಾಸರ್, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡ್ತಿದ್ದರು. ಸುಮಾರು ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ. ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ ರಾಬರಿಯಲ್ಲಿ ನಿಪುಣನಾಗಿದ್ದ.
ಇಂದು ಬೆಳಗ್ಗೆ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದ. ಪ್ಯಾಲೇಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಿಡಿದು ಅಟ್ಯಾಕ್ ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗೆ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಶೇಷಾದ್ರಿಪುರಂ ಇನ್ಸ್ ಪೆಕ್ಟರ್ ಅರೆಸ್ಟ್ ಮಾಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.