ಬೆಂಗಳೂರು: ವಿಧಾನಸಭೆಯಲ್ಲಿಂದು ಜೈನಮುನಿ ಹತ್ಯೆ ಪ್ರಕರಣ ದೊಡ್ಡದಾಗಿಯೇ ಸದ್ದುಮಾಡ್ತು.. ಹತ್ಯೆಯ ಹಿಂದೆ ದೊಡ್ಡವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸ್ತು.. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ರೂ ಓರ್ವ ಆರೋಪಿಯ ಬಗ್ಗೆ ಗುಟ್ಟು ಬಿಟ್ಟುಕೊಡ್ತಿಲ್ಲ.. ಇದು ಜನರ ಅನುಮಾನಕ್ಕೆ ಕಾರಣವಾಗಿದ್ದು, ಸಿಬಿಯು ತನಿಖೆಗೆ ಕೊಡುವಂತೆ ಪಟ್ಟು ಹಿಡಿಯಿತು.. ಇದ್ರಿಂದ ಸದನಲ್ಲಿ ದೊಡ್ಡ ಸದ್ದುಗದ್ದಲವೂ ಆಯ್ತು..
ವಿಧಾನಸಭೆಯಲ್ಲಿಂದು ಹಿರೆಕೊಡುಗೆಯ ಜೈನಮುನಿಯ ಹತ್ಯೆ ಪ್ರಕರಣ ದೊಡ್ಡ ಸದ್ದುಮಾಡ್ತು.. ಪ್ರಶ್ನೋತ್ತರದ ನಂತರ ಶೂನ್ಯವೇಳೆಯಲ್ಲಿ ಶಾಸಕ ಅಭಯ್ ಪಾಟೀಲ್ ವಿಷಯ ಪ್ರಸ್ತಾಪಿಸಿದ್ರು.. ದಿಗಂಬರ ಮುನಿಯ ಹತ್ಯೆ ಹಣಕಾಸಿನ ವಿಚಾರವಾಗಿ ಆಗಿದೆ ಅಂತ ಹೇಳಲಾಗ್ತಿದೆ.. ಬಂಧಿಸಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬರ ಹೆಸರನ್ನ ಮಾತ್ರ ಹೇಳ್ತಿದ್ದಾರೆ.. ಮತ್ತೊಬ್ಬ ಆರೋಪಿಯ ಹೆಸರನ್ನೇ ಹೇಳ್ತಿಲ್ಲ.. ತನಿಖೆ ಹಳ್ಳಹಿಡಿದಿದ್ದು, ಸತ್ಯಾಂಶ ಹೊರಬರುವುದಿಲ್ಲ ಅಂತ ಆಕ್ರೋಶ ಹೊರಹಾಕಿದ್ರು..
ಪ್ರಕರಣದ ಸತ್ಯಾಂಶ ಹೊರಬಾರಬೇಕಾದ್ರೆ ಸಿಬಿಐ ತನಿಖೆಗೆ ನೀಡಬೇಉ.. ಆಗ ಸತ್ಯಾಂಶ ಹೊರ ಬರಲಿದೆ ಹೀಗಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದ್ರು.. ಇದಕ್ಕೆ ಪೂರಕವಾಗಿ ಮಾಜಿ ಗೃಹ ಸಚಿವ ಅರಗ ಜ್ಙಾನೇಂದ್ರ,ಶಶಿಕಲಾ ಜೊಲ್ಲೆ ಕೂಡ ಧ್ವನಿ ಗೂಡಿಸಿದ್ರು..
ಇನ್ನು ಜೈನ ಮುನಿಗಳಹತ್ಯೆ ಪ್ರಕರಣದ ಬಗ್ಗೆ ಹಿಂದು ಫೈರ್ ಬ್ರಾಂಡ್ ಬಸನಗೌಡ ಯತ್ನಾಳ್ ಆಕ್ರೋಶವನ್ನ ಹೊರಹಾಕಿದ್ರು.. ಜೈನ ಮುನಿಗಳ ಸಾವನ್ನ ಯಾರನ್ನೂ ಒಪ್ಪಲ್ಲ.. ಮುನಿಗಳು, ಸಂತರಿಗೆ ಇವತ್ತು ರಕ್ಷಣೆಯಿಲ್ಲದಂತಾಗಿದೆ.. ಹಣಕಾಸು ನೆಪಮಾಡಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಅಂತ ಆರೋಪಿಸಿದ್ರು.. ಟಿ.ನರಸೀಪುರದಲ್ಲೂ ಹಿಂದು ಮುಖಂಡನ ಹತ್ಯೆಯಾಗಿದೆ.. ಈ ಸರ್ಕಾರ ಬಂದ್ಮೇಲೆ ಪಾಕ್ ಧ್ವಜ ಹಾರಾಡ್ತಿದೆ ಅಂತ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ್ರು.. ಒಬ್ಬ ಆರೋಪಿ ಹೆಸರನ್ನ ಮಾತ್ರ ಹೇಳ್ತಾರೆ,ಮತ್ತೊಬ್ಬ ಆರೋಪಿ ಹೆಸರನ್ನೇ ಹೇಳ್ತಿಲ್ಲ..ಹಾಗಾಗಿ ಪೊಲೀಸರ ಕೈಯಲ್ಲಿ ತನಿಖೆ ಬೇಡ..ಸಿಬಿಐ ನಿಂದಲೇ ತನಿಖೆ ಮಾಡಿಸ್ಬೇಕು ಅಂತ ಒತ್ತಾಯಿಸಿದ್ರು..ಇನ್ನು ತೇರದಾಳ ಶಾಸಕ ಸಿದ್ದು ಸವದಿ ಅಂತ ಇದರ ಹಿಂದೆ ಉಗ್ರಗಾಮಿಗಳ ಕೈವಾಡವಿದೆ ಎಂದು ಆಕ್ರೋಶ ಹೊರಹಾಕಿದ್ರು.
ಬಿಜೆಪಿ ಶಾಸಕರ ಆರೋಪಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ತಣ್ಣಗೆ ಶಾಕ್ ಕೊಟ್ರು..ಮುನಿಗಳ ಹತ್ಯೆಯನ್ನ ಯಾರೂ ಒಪ್ಪುವುದಿಲ್ಲ.. ಇದು ಖಂಡನೀಯವಾದುದು.. ಮುನಿಗಳುನನ್ನ ಕ್ಷೇತ್ರದಲ್ಲೇ ಬರ್ತಾರೆ..ಅವರ ಫ್ಯಾಮಿಲಿ ಜೊತೆ ನಿಕಟ ಸಂಬಂಧವಿದೆ.. ರಾತ್ರಿ ಓರ್ವವ್ಯಕ್ತಿ ವಿದ್ಯುತ್ ಶಾಕ್ ನೀಡಿ ಅವರನ್ನ ಕೊಲ್ತಾನೆ..ಮತ್ತೊಬ್ಬನ ಸಹಕಾರ ಪಡೆದು ತಮ್ಮ ಹೊಲಕ್ಕೆ ಸಾಗಿಸ್ತಾನೆ.. ಬೋರ್ ವೆಲ್ ಗೆ ಹಾಕಿ ಮುಚ್ಚೋಕೆ ಪ್ರಯತ್ನ ಮಾಡ್ತಾರೆ..ಎರಡು ದಿನ ಆದ ಕಾರಣ ಒಳಗೆ ತೂರಿಸೋದು ಕಷ್ಟವಾಗುತ್ತೆ.. ನಂತರ ಕೈಕಾಲು ಕಟ್ ಮಾಡ್ತಾರೆ, ಒಳಗೆ ಹೋಗದ ಕಾರಣ ತಲೆ ಕಟ್ ಮಾಡ್ತಾರೆ.. ಒಟ್ಟು ೯ ಭಾಗ ಮಾಡಿ ಕೊಳವೆ ಬಾವಿಗೆ ಹಾಕ್ತಾರೆ.. ಆರು ತಾಸಿನೊಳಗೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ..ಇಬ್ಬರನ್ನ ವಶಕ್ಕೆ ಪಡೆದು, ವಿಚಾರಣೆ ಕೈಗೊಂಡಿದ್ದಾರೆ.. ಸತ್ಯಾಂಶ ಹೊರಬರಲಿದೆ ಅಂತ ಇಡೀ ಘಟನೆಯ ಬಗ್ಗೆ ವಿವರಣೆ ನೀಡಿದ್ರು, ಜೊತೆಗೆ ನಿಸ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ್ರು.. ಅಲ್ಲದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ರು.. ಹೀಗಾಗಿ ಪ್ರಕರಣವನ್ನ ರಾಜಕೀಯಕ್ಕೆ ಎಳೆದು ತರುವ ಬಿಜೆಪಿ ಪ್ರಯತ್ನಕ್ಕೆ ನೀರು ಬಿಟ್ರು..
ಕಳೆದ ಅಸೆಂಬ್ಲಿ ಚುನಾವಣೆ ವೇಳೆ ಸದ್ದುಮಾಡಿದ್ದ ಚಿಲುಮೆ ಅಕ್ರಮ ಡಾಟಾ ಸಂಗ್ರಹ ಪ್ರಕರಣ ಮತ್ತೊಮ್ಮೆ ಸದ್ದುಮಾಡ್ತು.. ರಾಜ್ಯಪಾಲರ ಭಾಷಣದ ಮೇಲೆ ಮಾಜಿ ಸಿಎಂ ಬೊಮ್ಮಾಯಿ ಮಾತನಾಡ್ತಿದ್ರು.. ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಪ್ರಸ್ತಾಪಿಸ್ತಿದ್ರು.. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಅಶ್ಚಥ್ ನಾರಾಯಣ್ 2012 ರಲ್ಲೂ ಸಿದ್ರಾಮಯ್ಯ10 ಕೆಜಿ ಅಕ್ಕಿಘೋಷಿಸಿದ್ರು.. ಆದ್ರೆ ಅನುಷ್ಠಾನಕ್ಕೆ ತರ್ಲಿಲ್ಲ ಅಂತ ಆರೋಪಿಸಿದ್ರು.. ಈ ವೇಳೆ ನೀವುಸದನಕ್ಕೆ ತಪ್ಪು ಮಾಹಿತಿ ನೀಡ್ಬೇಡಿ,ಆಗ 10 ಕೆಜಿ ಅಕ್ಕಿ ಘೋಷಿಸಿರಲಿಲ್ಲ ಅಂತ ಸಚಿವ ಭೈರತಿಸುರೇಶ್ ಆಕ್ಷೇಪಿಸಿದ್ರು.. ಈ ವೇಳೆ ಮಾತು ಎಂಎಲ್ಸಿ ಬಗ್ಗೆ ಹೊರಳ್ತು.. ೧೦ ಕೆ.ಜಿ.ಅಕ್ಕಿ ಕೊಟ್ಟಾಗ ನೀವು ಶಾಸಕರಾಗಿರ್ಲಿಲ್ಲ ಅಂತ ಅಶ್ಚಥ್ ನಾರಾಯಣ್ ಸುರೇಶ್ ಗೆ ಕಿಚಾಯಿಸಿದ್ರು.. ಆಗ ನಾನು ಎಂಎಲ್ಸಿ ಆಗಿದ್ದೆ,ಎಲ್ಲೂ ನಾನು ಶಾಸಕ ಅಲ್ಲ ಅಂತ ನಿಮ್ಮ ಚಿಲುಮೆ ಸಂಸ್ಥೆ ನಿಮಗೆ ಮಾಹಿತಿ ಕೊಟ್ಟಿತ್ತೇನೋ ಅಂತ ಸುರೇಶ್ ಲೇವಡಿ ಮಾಡಿದ್ರು.. ಮುಂದುವರಿದು ಚಿಲುಮೆ ಒಲುಮೆ ಎಲ್ಲವೂ ನಿಮ್ಮದೇ ಅಂತ ಅಶ್ವಥ್ ನಾರಾಯಣ್ ವಿರುದ್ಧ ನೇರ ಆರೋಪ ಮಾಡಿದ್ರು..ಈ ವೇಳೆ ಇಬ್ಬರ ನಡುವೆ ಟಾಕ್ ವಾರ್ ಶುರುವಾಯ್ತು..
ಒಟ್ನಲ್ಲಿ ಇವತ್ತಿನ ವಿಧಾನಸಭೆ ಕಲಾಪದಲ್ಲಿ ಹಿರೆಕೊಡುಗೆ ಜೈನಮುನಿಯ ಹತ್ಯೆ ಪ್ರಕರಣ ದೊಡ್ಡ ಚರ್ಚೆಯಾಯ್ತು.. ಗೃಹ ಸಚಿವರು ಘಟನಾ ಸ್ಥಳಕ್ಕೆ ಭೇಟಿನೀಡಿರೋದ್ರಿಂದ ನಾಳೆ ಈಪ್ರಕರಣದ ಬಗ್ಗೆ ಸದನಲ್ಲಿ ಉತ್ತರ ನೀಡಲಿದ್ದಾರೆ..ಇದ್ರ ಜೊತೆ ಪ್ರಶ್ನೋತ್ತರ ಹಾಗೂ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗಳೂ ನಡೆದ್ವು..