ಬೆಂಗಳೂರು: ಇಂದಿರಾ ಕ್ಯಾಂಟಿನ್ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಇಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ ಹಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಈಗ ಪ್ರತಿ ಇಂದಿರಾ ಕ್ಯಾಂಟೀನ್ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.ಹಾಗೆ ಇಂದಿರಾ ಕ್ಯಾಂಟೀನ್ ಸಿಗಲಿದೆ ಹೈಟೆಕ್ ಸ್ಪರ್ಶ ಏನಂತೀರಾ ಇಲ್ಲಿದೆ ನೋಡಿ.
ಆಗಸ್ಟ್ 1ರಿಂದ ಬದಲಾದ ರೂಪದಲ್ಲಿ ಇಂದಿರಾ ಕ್ಯಾಂಟೀನ್ಗಳು..!
– ಹೊಸ ಟೆಂಡರ್, ಹೊಸ ಮೆನುವಿನೊಂದಿಗೆ ಕಾರ್ಯನಿರ್ವಹಿಸಲಿವೆ ಇಂದಿರಾ ಕ್ಯಾಂಟೀನ್ಗಳು
– ಇಂದಿರಾ ಕ್ಯಾಂಟೀನ್ ಟೆಂಡರ್ಗೆ ಸರ್ಕಾರದಿಂದ ನಡಾವಳಿ ಸಿದ್ದ
– ನಡಾವಳಿ ಸಿದ್ಧಪಡಿಸಿ ಬಿಬಿಎಂಪಿಗೆ ರವಾನೆ ಮಾಡಿರುವ ನಗರಾಭಿವೃದ್ಧಿ ಇಲಾಖೆ
– ಸರ್ಕಾರದ ನಡಾವಳಿಯಂತೆ ಟೆಂಡರ್ ಡಾಕ್ಯುಮೆಂಟ್ಸ್ ತಯಾರಿಸ್ತಿರುವ ಬಿಬಿಎಂಪಿ
– ವಲಯವಾರು ಟೆಂಡರ್ ಕರೆಯಲು ಡಾಕ್ಯುಮೆಂಟ್ಸ್ ಸಿದ್ಧಪಡಿಸ್ತಿರುವ ಅಧಿಕಾರಿಗಳು
ಮುಂದಿನ 3 ದಿನಗಳಲ್ಲಿ ಇಂದಿರಾ ಕ್ಯಾಂಟೀನ್ಗೆ ಟೆಂಡರ್
– 15 ರಿಂದ 20 ದಿನಗಳ ಒಳಗೆ ಟೆಂಡರ್ ಫೈನಲ್
– ಕಳೆದ ಬಾರಿಯ ಟೆಂಡರ್ ಮೊತ್ತಕ್ಕೂ ಹೊಸ ಟೆಂಡರ್ ಮೊತ್ತಕ್ಕೂ ವ್ಯತ್ಯಾಸ
ಹೊಸ ಮೆನುವಿನೊಂದಿಗೆ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸಲಿವೆ ಇಂದಿರಾ ಕ್ಯಾಂಟೀನ್ಗಳು