ಬೆಂಗಳೂರು: ಕಲಾಪಕ್ಕೆ ನಗುತ್ತಾ ಸ್ಪೀಕರ್ ಯುಟಿ ಖಾದರ್ ಸದನಕ್ಕೆ ಬಂದರು. ಸದನಕ್ಕೆ ಬಂದ ಕೂಡಲೇ ಏನು ಖುಷಿಯಾಗಿದ್ದೀರಿ ಎಂದು ವಿಪಕ್ಷ ಬಿಜೆಪಿ ಸದಸ್ಯರು ಕೇಳಿದರು. ಇದಕ್ಕೆ ಸ್ಪೀಕರ್ ನಾನು ನಗುತ್ತಾ ಇದ್ದರೆ ನೀವು ನಗುತ್ತಾ ಇರುತ್ತೀರಿ. ನಾನು ಟೆನ್ಷನ್ನಲ್ಲಿ ಇದ್ದರೇ ನೀವೂ ಟೆನ್ಷನ್ನಲ್ಲಿ ಇರುತ್ತೀರಿ. ಅದಕ್ಕೆ ನಾನು ನಗುತ್ತಾ ಇರುತ್ತೇನೆ ಎಂದರು.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಮತ್ತು ಮೈಸೂರು ಜಿಲ್ಲೆ ಟಿ. ನರಸೀಪುರದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣವನ್ನು ಅಸ್ತ್ರವಾಗಿ ಬಳಸಲು ಹೊರಟಿರುವ ಬಿಜೆಪಿ ಇಂದು ವಿಧಾನಸಭೆ ಮತ್ತು ವಿಧಾನ ಪರಿಷತ್ನಲ್ಲಿ ಧರಣಿ ನಡೆಸಲಿದೆ. ಬಿಜೆಪಿ ಹೀಗಾಗಿ ಈ ಎರಡೂ ಕೊಲೆಗಳನ್ನು ಖಂಡಿಸಿ ಇಂದು ವಿಪಕ್ಷ ಬಿಜೆಪಿ ಸದಸ್ಯರು ಉಭಯ ಸದನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.