ಗದಗ;- ಶಿವಮೊಗ್ಗ ಜಲಾಶಯದಲ್ಲಿ ಹೊರಹರಿವು ಹೆಚ್ಚಳವಾದ ಹಿನ್ನೆಲೆ ಗದಗನ ಹಮ್ಮಿಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಅನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದು, ಇದೀಗ 3.14 TMC ಸಾಮರ್ಥ್ಯ ಹೊಂದಿದೆ.
16,350 ಕ್ಯೂಸೆಕ್ಸ್ ಒಳಹರಿವು ಹೆಚ್ಚಳವಾದ ಹಿನ್ನೆಲೆ, ಬ್ಯಾರೇಜ್ ನಿಂದ 16350 ಹೊರಹರಿವು ಬಿಡಲಾಗಿದೆ. ಡ್ಯಾಂನ 26 ಗೇಟ್ ಗಳಲ್ಲಿ ಸದ್ಯ 06 ಗೇಟ್ ಗಳನ್ನ ಓಪನ್ ಮಾಡಲಾಗಿದ್ದು, ತುಂಗಭದ್ರಾ ನದಿಯ ಬ್ಯಾರೇಜ್ ತುಂಬಿ ಹರಿಯುತ್ತಿದೆ.