ಬೆಂಗಳೂರು: ರಾಜ್ಯ ಸರ್ಕಾರ ಬಹುನಿರೀಕ್ಷಿತ 2023-2024 ನೇ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ರಾಜ್ಯದ ರೈತರಿಗೆ ನಿರಾಶೆ ತಂದಿದೆ ಹಾಗೆ ವ್ಯಾಪಾರಸ್ಥರು ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಹಣ ನೀಡದೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿದ್ದಾರೆ ಅವರಿಗೆ ನಾಯ ಕೊಡಿಸಿ ಎಂದು ವಿಧಾನಪರಿಷತ್ ಶಾಸಕರಾದ ಡಾ. ಟಿ. ಎ. ಶರವಣ ಅವರು ಕೃಷಿ ಸಚಿವರನ್ನು ಆಗ್ರಹಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನದಲ್ಲಿ ಕೃಷಿಗೆ ಸಂಬಂಧಪಟ್ಟ ಬಜೆಟ್ ಮಂಡನೆಯ ಕುರಿತಂತೆ ಪ್ರಶ್ನಿಸಿದ ಅವರುದೊಡ್ಡ ದೊಡ್ಡ ಕೃಷಿ ಉತ್ಪನ್ನ ಕಂಪನಿಗಳು ವ್ಯಾಪಾರಸ್ಥರು ರೈತರಿಂದ ಕೃಷಿ ಉತ್ಪನ್ನ ಖರೀದಿಸಿ ಹಣ ನೀಡದೆ ದೊಡ್ಡ ಮಟ್ಟದಲ್ಲಿ ವಂಚನೆ ಮಾಡಿದ್ದಾರೆ ಇದಕ್ಕೆ ಪರಿಹಾರವೇನು ಮಾಡುತ್ತೀರಾ?
ಅಂದ ಹಾಗೆ ದಾವಣಗೆರೆ, ರಾಯಚೂರು,ಬೆಳಗಾವಿ ಕಡೆಯ ನೂರಾರು ರೈತರು ತಮ್ಮ ಉತ್ಪನ್ನಗಳನ್ನು ಮಾರಿ ಹಣ ಇಲ್ಲದೆ ಕಂಗಾಲಾಗಿದ್ದಾರೆ. ಹೀಗೆ ಅನ್ಯಾಯವಾದ ರೈತರಿಗೆ ನ್ಯಾಯ ದೊರಕಿಸಲು ವರ್ತಕರಿಂದ ಮತ್ತು ಕಂಪನಿಗಳಿಂದ ಹಣ ಕೊಡಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವರನ್ನು ಪ್ರಶ್ನೆ ಮಾಡಿದರು.