ಧಾರವಾಡ: ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೇ ರೈತನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಬಳಿ ಇರುವ ಸೈಬನಕೊಪ್ಪ ಗ್ರಾಮದಲ್ಲಿ ನಡೆದಿದೆ. ಉಪ್ಪಿನ ಬೆಟಗೇರಿ ಗ್ರಾಮದ ಕಲ್ಲಪ್ಪ ಕುರಗುಂದ (55) ರೈತನೇ ಆತ್ಮಹತ್ಯೆ ಶರಣಾದ ರೈತನಾಗಿದ್ದಾನೆ. ಕೃಷಿ ಚಟುವಟಿಕೆಗಾಗಿ ವಿವಿಧ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದ.
ಅಲ್ಲದೇ ತನಗಿದ್ದ ಜಮೀನನ್ನು 7 ಲಕ್ಷ ರೂಪಾಯಿಗೆ ಲೀಸ್ನಲ್ಲಿ ಹಾಕಿಕೊಂಡಿದ್ದ. ಮಳೆಯಾಗದ ಕಾರಣ ಕೃಷಿ ಸಾಲ ತೀರಿಸಲಾಗದೇ ಹಾಗೂ ಲೀಸ್ನಲ್ಲಿದ್ದ ಹೊಲವನ್ನು ಬಿಡಿಸಿಕೊಳ್ಳಲಾಗದೇ ಕಲ್ಲಪ್ಪ ನೇಣಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ