ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ಪೆನ್ಡ್ರೈವ್ನಲ್ಲಿ ಏನೂ ಇಲ್ಲ ಎಂದು ಬೆಂಗಳೂರು ನಗರದ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಅವರು ಖಾಲಿ ಪೆನ್ಡ್ರೈವ್ ತೋರಿಸಿ ಯಾಮಾರಿಸುತ್ತಿದ್ದಾರೆ. ಪೆನ್ಡ್ರೈವ್ ತೆಗೆದು ತೋರಿಸಿ ಮತ್ತೆ ಜೇಬಿಗೆ ಹಾಕಿಕೊಳ್ಳುತ್ತಾರೆ. ಒಂದು ವಾರದಿಂದ ಹೆಚ್.ಡಿ.ಕುಮಾರಸ್ವಾಮಿ ಇದನ್ನೇ ಮಾಡುತ್ತಿದ್ದಾರೆ. ಪೆನ್ಡ್ರೈವ್ನಲ್ಲಿ ಏನಾದರೂ ಇದ್ದರೆ ಇಷ್ಟೊತ್ತಿಗೆ ತೋರಿಸುತ್ತಿದ್ದರು ಎಂದರು.
ಕಾಂಗ್ರೆಸ್ ನಾಯಕರು ದಮ್ಮು, ತಾಕತ್ ಇದ್ರೆ ಈಗಲೇ ಪೆನ್ ಡ್ರೈವ್ನಲ್ಲಿ ಏನಿದೆ ತೋರಿಸಲಿ ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು. ಪೆನ್ ಡ್ರೈವ್ ಇಟ್ಕೊಂಡು ಅವ್ರೇನಾದ್ರೂ ದಂಧೆ ಮಾಡ್ತಾ ಇದ್ದಾರಾ. ಕುಮಾರಸ್ವಾಮಿ ಹಿಟ್ ಅಂಡ್ ರನ್ ಗಿರಾಕಿ ಅಂತ ಕಾಂಗ್ರೇಸ್ ನಾಯಕರು ವ್ಯಂಗ್ಯವಾಡ್ತಿದ್ದಾರೆ.
ಸದನದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಯಾರ ವಿರುದ್ದ ಪೆನ್ ಡ್ರೈವ್ ಬಿಡುಗಡೆ ಮಾಡ್ತಾರೆ. ಯಾವ ಶಾಸಕ ಸಚಿವರ ರಾಜೀನಾಮೆ ಒತ್ತಾಯಿಸ್ತಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿದ್ರೆ. ಕಾಂಗ್ರೆಸ್ ನಾಯಕರು ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತನಿಖೆ ಮಾಡಿಸ್ತೇವೆ ಅಂತ ತಿರುಗೇಟು ಕೊಡ್ತಿದ್ದಾರೆ ಎಲ್ಲದಕ್ಕು ಆಡಿಯೋ ಬಿಡುಗಡೆಯಾದ್ಮೇಲೇ ಉತ್ತರಸಿಗಬೇಕಾಗಿದೆ…