ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದೊಂದು ಇಂಚು ಭೂಮಿಗೆ ಬಂಗಾರ ಬೆಲೆ ಇದೆ. ಹೀಗಾಗಿ ಭೂಗಳ್ಳರ ಹಾವಳಿ ಜಾಸ್ತಿಯಾಗ್ತಿದೆ. ಸರ್ಕಾರಿ ಪುಟ್ ಪಾತ್ ಸ್ವತ್ತಿಗೂ ಕಂಡ ಕಂಡಲ್ಲಿ ಬೆಲಿ ಹಾಕ್ತಿದ್ದಾರೆ. ಅಂತಹವರಿಗೆ ಇವತ್ತು ಮಹಾದೇವಪುರ ಬಿಬಿಎಂಪಿ ಜೆಸಿ ಮೇಡಮ್ ಚಳಿ ಬಿಡಿಸುವ ಕೆಲಸ ಮಾಡಿದರು. ಫುಟ್ ಪಾತ್ ಜಾಗವೆಲ್ಲ ನುಂಗಿದವರ ಮೇಲೆ ವಲಯದ ಎಲ್ಲೆಡೆ ಫುಟ್ ಪಾತ್ ಒತ್ತುವರಿ ಆಪರೇಷನ್ ಮಾಡಿದರು. ಹಾಗಾದ್ರೆ ಮಹಾದೇವಪುರ ವಲಯದಲ್ಲಿ ಫುಟ್ ಪಾತ್ ಆಪರೇಷನ್ ತೆರವು ಇವತ್ತು ಹೇಗಿತ್ತು ಬನ್ನಿ ತೋರಿಸ್ತೀವಿ
ಬೆಂಗಳೂರು ಬೆಳೆದಂತೆ ಒಂದೊಂದು ಇಂಚು ಜಾಗಕ್ಕೂ ಕೋಟಿ ಕೋಟಿ ಬೆಲೆ ಇದೆ.ಇದನ್ನೆ ಬಂಡವಾಳ ಮಾಡಿರೋ ಜನ ಸಿಕ್ಕ ಸಿಕ್ಕ ಜಾಗಕ್ಕೂ ನಮ್ದು ಅಂತ ಬೇಲಿ ಹಾಕಿಕೊಳ್ಳಿದ್ದಾರೆ. ಇದರಿಂದ ನಿತ್ಯ ರಸ್ತೆಗಳಲ್ಲಿ ಓಡಾಟ ನಡೆಸುವ ಜನರಿಗೆ ತೊಂದರೆ ಆಗ್ತಿದೆ.ಆದ್ರೆ ಇದನ್ನ ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾಗಿದೆ. ಒಂದು ಕಡೆ ಮಹಾದೇಪುರ ವಲಯದಲ್ಲಿ ರಾಜಕಾಲುವೆ ಒತ್ತುವರಿ ವಿರುದ್ದ ಘರ್ಜನೆ ಮಾಡ್ತಿರೋ ಪಾಲಿಕೆ ಇದೀಗ ಫುಟ್ ಪಾತ್ ಒತ್ತುವರಿದಾರರ ವಿರುದ್ದವೂ ಸಮರ ಸಾರುವುದಕ್ಕೆ ಮುಂದಾಗಿದೆ.
ಹೌದು..ಇವತ್ತು ಮಹಾದೇಪುರ ವಲಯದ ಬಿಬಿಎಂಪಿ ಜಂಟಿ ಆಯುಕ್ತೆ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ವಲಯದ ಹಲವೆಡೆ ಬೃಹತ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.ಮಾರತಹಳ್ಳಿ ಮುಖ್ಯ ರಸ್ತೆ, ಎಚ್.ಎ.ಎಲ್, ಹೂಡಿ, ವೈಟ್ಫೀಲ್ಡ್ ಮತ್ತು ಇತರೆಡೆ ವಿದ್ಯುತ್ ಕಂಬ ಮತ್ತು ಮರಗಳ ಮೇಲೆ ಜೋತಾಡುತ್ತಿದ್ದ ಕೇಬಲ್ಗಳನ್ನು ಬಿಬಿಎಂಪಿ ಸಿಬ್ಬಂದಿ ಕಿತ್ತುಹಾಕಿದರು. ಮಹದೇವಪುರ ವಲಯದ ಹಲವೆಡೆ ಕಿ.ಮೀ ಉದ್ದದ ಕೇಬಲ್ ತೆರವುಗೊಳಿಸಲಾಯಿತು. .ಪಾದಚಾರಿಗಳು ಓಡಾಡಬೇಕಾದ ಫುಟ್ ಪಾತ್ ಮೇಲೆ ಬೀದಿಬದಿ ವ್ಯಾಪಾರಿಗಳು ಅಂಗಡಿ ಇಟ್ಟುಕೊಂಡಿದ್ದರಿಂದ ವಲಯದಲ್ಲಿ ಹಲವು ಅಪಘಾತಗಳು ಸಂಭವಿಸಿದೆ. ಈ ಅಂಗಡಿಗಳ ಕಾರಣ ಜನರು ರಸ್ತೆ ಮೇಲೆ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಜನರು ರಸ್ತೆ ಮೇಲೆ ವಾಕಿಂಗ್ ಮಾಡ್ತಿದ್ದು, ಅಪಘಾತಗಳು ಸಂಭವಿಸುತ್ತಿದೆ. ಇಂಥಾ ಅಪಘಾತಗಳನ್ನು ತಪ್ಪಿಸಲು ಮುಖ್ಯ ರಸ್ತೆಗಳ ಬದಿಗಳಲ್ಲಿ ವ್ಯಾಪಾರಕ್ಕೆ ಪಾಲಿಕೆಯಿಂದ ಕೊಕ್ ನೀಡಲಾಗಿದೆ..ರಸ್ತೆ ಬದಿ ಅಂಗಡಿ ಮುಗ್ಗಟ್ಟು ಗಳನ್ನು ಇಟ್ಟಿಕೊಟ್ಟವರ ವಿರುದ್ಧ ಅಧಿಕಾರಿಗಳು ಸಮರ ಸಾರಿದರು.
ಇನ್ನು ಹಲವು ಕಡೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಂಗಡಿ ಮುಂಗಟ್ಟುಗಳನ್ನು ಮತ್ತು ಅನಧಿಕೃತವಾಗಿ ಅಳವಡಿಸಿದ್ದ ಒಎಫ್ಸಿಯನ್ನ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು. ಪಾದಚಾರಿಗಳ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತರ ಸೂಚನೆಯಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.‘ಕೇಬಲ್ಗಳನ್ನು ಜೋತು ಹಾಕಿದರೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು ಮತ್ತು ದಂಡ ವಸೂಲಿ ಮಾಡಲಾಗುವುದು. ಬ್ಯಾನರ್, ಬಂಟಿಂಗ್ಸ್, ಅಂಗಡಿ ಮುಂಭಾಗದಲ್ಲಿನ ಶೀಟ್ಗಳನ್ನು ತೆರವುಗೊಳಿಸಲಾಗಿದೆ. ಜತೆಗೆ ಪಾದಚಾರಿ ಮಾರ್ಗದಲ್ಲಿರುವ ಗಿಡಗಳ ರೆಂಬೆಗಳ ಕಟಾವು ಮಾಡಿ ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಲಾಗಿದೆ. ಜೆಸಿಬಿ, ಗ್ಯಾಂಗ್ ಮ್ಯಾನ್ಗಳನ್ನು ಬಳಸಿಕೊಂಡು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಟ್ರ್ಯಾಕ್ಟರ್ ಹಾಗೂ ಕಾಂಪ್ಯಾಕ್ಟರ್ ನಲ್ಲಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.: ಪಾದಚಾರಿ ಮಾರ್ಗವನ್ನು ಒತ್ತವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದವರಿಗೆ ಇನ್ನು ಮುಂದೆ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಒಟ್ಟಿನಲ್ಲಿ ಸಿಟಿ ಬೆಳೆದಂತೆ ವಾಹನ ದಟ್ಟನೆ ಕೂಡ ಹೆಚ್ಚಾಗ್ತಿದೆ,ಅಂದ್ರಲ್ಲೂ ಐಟಿ ಬಿಟಿ ವಲಯ ಎನ್ನಿಸಿಕೊಂಡಿರೋ ಮಹಾದೇವಪುರ ವಲಯದಲ್ಲಿ ಫೂಟ್ ಪಾತ್ ಒತ್ತುವರಿ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳ ಬಂದ ಬೆನ್ನಲ್ಲೇ ಇಂದು ಫುಟ್ ಫಾತ್ ತೆರವು ಕಾರ್ಯ ಮಾಡಲಾಗಿದೆ.ಇದರಿಂದ ವಲಯದೆಲ್ಲಡೆ ಒತ್ತುವರಿದಾರಿಗೆ ನಡುಕ ಶುರುವಾಗಿದೆ..