ಬೆಂಗಳೂರು : ಸಿಲಿಕಾನ್ ಸಿಟಿಯನ್ನೇ ನಡುಗಿಸಿದ ಅಮೃತಹಳ್ಳಿ ಪಂಪಾನಗರದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಹಂತಕ ಜಿ-ನೆಟ್ ಕಂಪನಿ ಮಾಲೀಕ, ಎಎಪಿ ಮುಖಂಡ ಅರುಣ್ ಕುಮಾರ್ ನನ್ನ ಅಮೃತಹಳ್ಳಿ ಪೊಲೀಸರು ಜು.12ರ ರಾತ್ರಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಅರುಣ್ ಕುಮಾರ್, ಜಿ-ನೆಟ್ ಕಂಪನಿ ಮಾಲೀಕನಾಗಿದ್ದ. ಅಷ್ಟೆ ಅಲ್ಲದೆ ಎಎಪಿ ಪಕ್ಷದ ಮುಖಂಡನೂ ಆಗಿದ್ದ. ಅದೇ ಕಂಪನಿಯಲ್ಲಿ ಹೆಚ್ ಆರ್ ಆಗಿ ಫಣೀಂದ್ರ ಕೆಲಸ ಮಾಡುತ್ತಿದ್ದ. ಜಿ-ನೆಟ್ ನಲ್ಲಿ ಸಿಇಓ ಆಗಿ ವಿನು ಕುಮಾರ್ ಕೆಲಸ ಮಾಡುತ್ತಿದ್ದ.
ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಮಾಡಿ ಯಾವ ರೀತಿ ಎಸ್ಕೇಪ್ ಆಗ ಬೇಕು ಎಂಬ ಬಗ್ಗೆಯೂ ಹಂತಕರು ಪ್ಲಾನ್ ಮಾಡಿಕೊಂಡಿದ್ದರು. ಬೈಕ್ ನಲ್ಲಿ ಬಂದಿದ್ದ ಹಂತಕರು ಎಸ್ಕೇಪ್ ಆಗಿದ್ದು ಬರಿಗಾಲಲ್ಲಿ. ಕೊಲೆ ನಂತರ ಎಸ್ಕೇಪ್ ಆಗೋದು ಹೇಗೆ ಅನ್ನೊದನ್ನ ಫಿಲೆಕ್ಸ್ ಮೊದಲೆ ಪ್ಲಾನ್ ಮಾಡಿದ್ದ. ಒಂದು ತಿಂಗಳ ಹಿಂದೆಯೇ ಸ್ಥಳಕ್ಕೆ ಬಂದಿದ್ದ ಫಿಲೆಕ್ಸ್, ಎಸ್ಕೇಪ್ ಆಗೋ ರೂಟ್ ಗಳನ್ನ ಪ್ಲಾನ್ ಮಾಡಿದ್ದ.
ಆರೋಪಿಗಳು ಹಿಂಬದಿ ಡೋರ್ ತೆಗೆದು ಕಾಂಪೌಂಡ್ ಹಾರಿ ಎಸ್ಕೇಪ್ ಆಗಿ ನಂತರ ಮುಖ್ಯ ರಸ್ತೆಗೆ ಬಂದು ಓಲಾ ಬುಕ್ ಮಾಡಿದ್ದರು. ಕೊಲೆ ನಂತರ ಫಿಲೆಕ್ಸ್ಅಂಡ್ ಟೀಂ ಎಸ್ಕೇಪ್ ಆಗೋ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ವಿನಯ್ ಕುಮಾರ್ ರೆಡ್ಡಿ ತನ್ನ ಪ್ಯಾಂಟ್ ನಲ್ಲಿ ಡ್ರ್ಯಾಗರ್ ಇಟ್ಟುಕೊಂಡು ಎಸ್ಕೇಪ್ ಆಗಿದ್ದು ಡ್ರ್ಯಾಗರ್ ಇಟ್ಟುಕೊಳ್ಳಲು ಸಂತೋಷ್ ಸಹಾಯ ಮಾಡಿದ್ದಾನೆ. ಸಾಚಾ ಎಂಬಂತೆ ಆರೋಪಿ ಫಿಲೆಕ್ಸ್ ಜುಬ್ಬ ಧರಿಸಿ ಕೊಲೆ ಮಾಡಲು ಬಂದಿದ್ದ. ಯಾರ ಭಯವೂ ಇಲ್ಲದೇ ರಾಜಾ ರೋಷವಾಗಿ ಆರೋಪಿಗಳು ಎಸ್ಕೇಪ್ ಆದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.