ಬೆಂಗಳೂರು: ಕಾರು ಕಳ್ಳತನ ಮಾಡೋದು ಮೊಬೈಲ್ ಕದಿಯೋದನ್ನು ನೋಡಿಯೇ ಇರ್ತಿರಾ, ಆದ್ರೆ ಇಲ್ಲೋಬ್ಬ ಆಸಾಮಿ ನಿಂತಿದ್ದ ಲಾರಿಗಳನ್ನೆ ಕದ್ದು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗ್ತಾಯಿದ ರಾಜ್ಯದಿಂದ ರಾಜ್ಯಕ್ಕೆ ಹೋಗಿ ಕದ್ದ ಲಾರಿಗಳನ್ನು ಮಾರಾಟ ಮಾಡ್ತಾಯಿದ್ದವನಿಗೆ ಬೆಂಗಳೂರು ವಿ ವಿ ಪುರ ಪೊಲೀಸರ ಜೈಲಿನ ದಾರಿ ತೋರಿಸಿದ್ದಾರೆ..
ಒಂದು ಲಾರಿ ಖರೀದಿ ಮಾಡಬೇಕು ಅಂದ್ರೆ ಅದು ಸುಮ್ಮನೆ ಮಾತಲ್ಲ ಬಿಡಿ.. ಲೋನ್ ಮಾಡಬೇಕು, ಸಾಲ ಮಾಡಬೇಕು, ಅದಾದ ನಂತರ ಅದನ್ನು ಮೇಂಟೇನ್ ಮಾಡಬೇಕು ಹೀಗೆ ಸಾಕಷ್ಟು ಶ್ರಮ ಇರತ್ತೆ.. ಆದ್ರೆ ಅದೇ ಲಾರಿಯನ್ನು ಖದಿಯೋದಕ್ಕೆ ಮಾತ್ರ ಯಾವ ಶ್ರಮವು ಬೇಡ..ಹೌದು.. ಈ ಫೋಟೋದಲ್ಲಿರುವ ಆಸಾಮಿಯ ಹೆಸರು ಮುತ್ತು.. ಮೂಲತಃ ತಮಿಳುನಾಡಿನವನು.. ವೃತ್ತಿಯಲ್ಲಿ ಲಾರಿ ಡ್ರೈವರ್ ಆಗಿದ್ದ ಈತನಿಗೆ ಲಾರಿಗಳ ಬಗ್ಗೆ ಸಾಕಷ್ಟು ವಿಚಾರಗಳು ಸಹ ತಿಳಿದಿದ್ದು, ಹೆಚ್ಚಿನ ತಿಳುವಳಿಕೆಯು ಸಹ ಇತ್ತು.. ಆದನ್ನೆ ಅಡ್ವಾಂಟೇಜ್ ತಗೊಂಡ ಈತ ಡ್ರೈವಿಂಗ್ ಕೆಲಸ ಮಾಡುದ್ರೆ ಏನು ಲಾಭಾ ಇಲ್ಲಾ ಅಂತ ಲಾರಿಗಳನ್ನೆ ಹೈಜಾಕ್ ಮಾಡೋದಕ್ಕೆ ಶುರುಮಾಡಿದ್ದ.. ತನ್ನ ಕಣ್ಣಿಗೆ ಬಿದ್ದ ಲಾರಿಗಳನ್ನೆಲ್ಲಾ ಕ್ಷಣಾರ್ಧದಲ್ಲಿ ಮಂಗಮಾಯ ಮಾಡ್ತಾಯಿದ್ದ ಈ ಖತರ್ನಾಕ್ ಕಿಲಾಡಿ..
ಈ ಮುತ್ತು ಎಂಥಾ ಖತರ್ನಾಕ್ ಕಳ್ಳ ಅಂದ್ರೆ ಸಿಸಿಟಿವಿ ಇಲ್ಲದ ಕಡೆಗಳಲ್ಲಿ ಪಾರ್ಕ್ ಮಾಡಿದ್ದ ಲಾರಿಗಳನ್ನೆ ಟಾರ್ಗೆಟ್ ಮಾಡ್ತಾಯಿದ್ದ.. ಯಾರು ಇಲ್ಲದ ಸಮಯ ನೋಡಿ ಲಾರಿಯ ಕೀ ಇಲ್ಲದಿದ್ದರು ಸಹ ಲಾರಿಯನ್ನು ಡೈರೆಕ್ಟ್ ಮಾಡಿ ಅದನ್ನು ಸ್ಟಾರ್ಟ್ ಮಾಡಿಕೊಂಡು ಹೋಗ್ತಾಯಿದ್ದ.. ತಮಿಳುನಾಡಿನ ಚೆನ್ನೈ ಕಡೆಗೆ ಹೋಗುತ್ತಿದ್ದ ಈ ಮುತ್ತು ಲಾರಿಗಳನ್ನು ಸೇಲ್ ಮಾಡ್ತಾಯಿದ್ದ.. ಮೊದಲಿಗೆ ಪಾರ್ಟಿಗಳನ್ನು ರೆಡಿ ಮಾಡಿಕೊಳ್ತಾಯಿದ್ದ ಈ ಕಳ್ಳ ನಂತರ ಲಾರಿಗಳನ್ನು ತೆಗೆದುಕೊಂಡು ಹೋಗಿ ಲಾರಿಗಳನ್ನು ಮತ್ತು ಲಾರಿಯ ಬಿಡಿ ಬಾಗಗಳನ್ನು ಮಾರಾಟ ಮಾಡುತ್ತಿದ್ದ.. ಹೀಗೆ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯು ಸಹ ಲಾರಿಗಳನ್ನು ಕದ್ದು ನಂತರ ಅದನ್ನು ಚೆನ್ನೈ ನಲ್ಲಿ ಮಾರಾಟ ಮಾಡಿದ್ದ..
ಹೀಗೆ ವಿವಿಪುರಂ ಪೊಲೀಸರಿಗೆ ಈ ಬಗ್ಗೆ ದೂರು ಬಂದಿದ್ದು ಪ್ರಕರಣ ದಾಖಲು ಮಾಡಿಕೊಂಡು ಈತನಿಗಾಗಿ ಹುಡುಕಾಟ ಮಾಡಿದ್ರು.. ಆದ್ರೆ ಈತನನ್ನು ಹಿಡಿಯೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಸರಿಸುಮಾರು 500 ಕ್ಕು ಹೆಚ್ಚು ಸಿಸಿಟಿವಿಗಳನ್ನು ವಿವಿಪುರಂ ಪೊಲೀಸರು ಹುಡುಕಾಟ ಮಾಡಿದ ನಂತರ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ..
ಸದ್ಯ ಈತನನ್ನು ಬಂದಿಸುವಲ್ಲಿ ಇದೀಗ ವಿವಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.. ಈತನಿಗೆ ಲಾರಿ ಮಾರಾಟ ಮಾಡಲು ನಕಲಿ ಲಾರಿ ಡಾಕ್ಯೂಮೆಂಟ್ಸ್ ಗಳನ್ನು ಸಹ ರೆಡಿ ಮಾಡಲು ಒಂದು ಟೀಂ ಕೂಡ ಇದೆ ಎನ್ನಲಾಗಿದ್ದು ಹೀಗಾಗಿ ಆ ಟೀಂ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.