ಬೆಂಗಳೂರು ;– ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮದ್ಯ ಪ್ರಿಯರ ಕಿಕ್ ಇಳಿಸಿದ್ದು, ಅಕ್ಷರಶಃ ಸತ್ಯ. ಸಿಎಂ ಸಿದ್ದರಾಮಯ್ಯಾ ಅವರು ಮಂಡಿಸಿದ ೧೪ ನೇ ಬಜೆಟ್ ನಲ್ಲಿ, ರಾಜ್ಯದ ಆರ್ಥಿಕ ವ್ಯವಸ್ಥೆ ಬ್ಯಾಲೆನ್ಸ್ ಮಾಡಲು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ.
ಉಚಿತ ಯೋಜನೆಗೆ ಹಣ ಹೊಂದಾಣಿಕೆ ಮಾಡಲು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ. ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಸುಂಕ ಹೆಚ್ಚಳ ಮಾಡಲಾಗಿದೆ. ಜುಲೈ 7 ನೇ ತಾರೀಖಿನಂದು ಮಂಡಿಸಿದ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು ಇಗಾಗ್ಲೇ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆ ಪ್ರಪೋಸಲ್ ಸಲ್ಲಿಸಿದೆ.
ಯಾವ ಯಾವ ಬ್ರಾಂಡ್ ಗೆ ಎಷ್ಟು ಸುಂಕ ಹೆಚ್ಚಳ ಮಾಡಬೇಕೆಂದು ಸಿದ್ದತೆ ನಡೆಸಿದ್ದು, ಜುಲೈ 17 Or 18 ರಂದು ಎಲ್ಲಾ ಪ್ರಪೋಸಲ್ ಫೈನಲ್ ಆಗಲಿದೆ.
ಜುಲೈ 20 ರಿಂದ ಮದ್ಯ ಬೆಲೆ ಏರಿಕೆ ಕನ್ಫರ್ಮ್ ;- ವಿಸ್ಕಿ, ರಮ್, ಬ್ರಾಂಡಿ, ಜಿನ್ ಬಿಯರ್ ಸೇರಿದಂತೆ ಎಲ್ಲಾ ಬಗೆಯ ಮದ್ಯದ ಮೇಲೆ ಬೆಲೆ ಜುಲೈ 20 ರಿಂದ ಏರಿಕೆ ಮಾಡಲಾಗಿದೆ. 18 ಸ್ಲ್ಯಾಬ್ ಗಳ ಮೇಲೆ ಶೇಕಡ 20ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿದೆ.
೧ ರಿಂದ ೧೦ ನೇ ಸ್ಲ್ಯಾಬ್ ವರೆಗೆ ಮಧ್ಯಮ ಹಾಗೂ ಕಡಿಮೆ ದರದ ಮಧ್ಯ ಲಭ್ಯವಾಗಲಿದ್ದು ಆದರೆ ೧೦ ರಿಂದ 18 ನೇ ಸ್ಲ್ಯಾಬ್ ನಂತರ ದುಬಾರಿ ಬೆಲೆಯ ಮದ್ಯ ಲಭ್ಯವಾಗಲಿದೆ. ಅಬಕಾರಿ ಇಲಾಖೆಯಿಂದ ಒಟ್ಟು 18 ಸ್ಲ್ಯಾಬ್ ನಿಗದಿ ಮಾಡಲಾಗಿದ್ದು, ಸ್ಲ್ಯಾಬ್ ಹೊರತುಪಡಿಸಿ ಇತರ ಎಲ್ಲಾ ಬ್ರಾಂಡ್ಗಳು ಕರ್ನಾಟಕದಲ್ಲಿ ದುಬಾರಿ ಆಗಲಿವೆ.
ಪ್ರತಿ ಬಿಯರ್ ಬಾಟಲ್ ಗೆ 3 ರಿಂದ 5 ರೂಪಾಯಿ ಹೆಚ್ಚಳ ಸಾಧ್ಯತೆ ಇದ್ದು, ಜುಲೈ 20 ನೇ ತಾರೀಕಿನಿಂದ ಹೊಸ ಲೇಬಲ್ ನ ಬಾಟಲ್ ಗಳು ಮಾರಾಟಕ್ಕೆ ಬರಲಿವೆ. ಇಗಾಗ್ಲೇ ಹಳೆಯ ಲೇಬಲ್ ಬಾಟಲ್ ಗಳಿಗೆ ಯಾವುದೇ ಅಂಟಿಸುವುದಿಲ್ಲ. ಆದರೆ ಜುಲೈ ೨೦ ರ ನಂತರ ಉತ್ಪತ್ತಿ ಆಗುವ ಹೊಸ ಬೆಲೆಯ ಲೇಬಲ್ ಅಳವಡಿಕೆ ಮಾಡಲಾಗುತ್ತಮ. ಪ್ರಸಕ್ತ ಆರ್ಥಿಕ ವರ್ಷದ ವಾರ್ಷಿಕ 36 ಸಾವಿರ ಕೋಟಿ ಅಬಕಾರಿ ತೆರಿಗೆ ಸಂಗ್ರಯ ಗುರಿ ಹೊಂದಿದ್ದು ಕಳೆದ ವರ್ಷದ ಆರ್ಥಿಕ ವರ್ಷದಲ್ಲಿ ಸುಮಾರು 30 ಸಾವಿರ ಕೋಟಿ ಅಬಕಾರಿ ಸುಂಕ ವಸೂಲಿ ಆಗಿತ್ತು. ಈ ವರ್ಷ 6 ಸಾವಿರ ಕೋಟಿ ಹೆಚ್ಚುವರಿ ಅಬಕಾರಿ ಸುಂಕದ ಟಾರ್ಗೆಟ್ ಅನ್ನು ರಾಜ್ಯ ಸರ್ಕಾರ ನೀಡಿದೆ.
ಯಾವ ಬ್ರಾಂಡ್ ಎಷ್ಟು ಹೆಚ್ಚಳ…?
* ಹೈವರ್ಡ್ಸ್ – 10 ರೂ ಹೆಚ್ಚಳ
* ಬಡ್ ವೈಸರ್ – 20 ರೂ ಹೆಚ್ಚಳ
* ಕಿಂಗ್ ಫಿಷರ್ – 20 ರೂ ಹೆಚ್ಚಳ
* ಬ್ಯಾಗ್ ಪೈಪರ್ ವಿಸ್ಕಿ – 14 ರೂ ಹೆಚ್ಚಳ
* ಬ್ಲ್ಯಾಕ್ ಆಂಡ್ ವೈಟ್ – 336 ರೂ ಹೆಚ್ಚಳ
* ಓಲ್ಡ್ ಮೊಂಕ್ – 18 ರೂ ಹೆಚ್ಚಳ
* ಇಂಪಿರಿಯಲ್ ಬ್ಲೂ – 20 ರೂ ಹೆಚ್ಚಳ
* ಜಾನಿ ವಾಕರ್ ಬ್ಲ್ಯಾಕ್ ಲೇಬಲ್ – 900 ರೂ ಹೆಚ್ಚಳ
ಆದರೆ ಜುಲೈ ೨೦ ರ ನಂತರ ಬೆಲೆ ಬದಲಾವಣೆ ಫಿಕ್ಸ್ ಆಗಿದ್ದು, ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಡಿಮೆ ಬೆಲೆಯಲ್ಲಿ ಮದ್ಯ ಲಭ್ಯವಾಗಲಿದೆ. ತಮಿಳುನಾಡು ಕೇರಳ ಎಪಿ ತೆಲಂಗಾಣ ಮುಂಬಯಿ ದೆಹಲಿ ಈ ರಾಜ್ಯಗಳಲ್ಲಿ ಅತೀ ಅಗ್ಗದ ಬೆಲೆಯಲ್ಲಿ ಮದ್ಯ ಲಭ್ಯವಾಗಲಿದ್ದು, ಆದರೆ ಈ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಡಿಮೆ ದರದಲ್ಲಿ ಮದ್ಯ ಲಭ್ಯವಾಗಲಿದೆ.