ಬೆಂಗಳೂರು: ಟಿವಿ ಶೋಗಳಲ್ಲಿ ಮಕ್ಕಳಿಗೆ ಚಾನ್ಸ್ ಕೊಡಿಸುವುದಾಗಿ ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಈಗ ಸದಾಶಿವನಗರ ಪೊಲೀಸರ ಅತಿಥಿಯಾಗಿದ್ದಾಳೆ.
ಮಾಡೆಲಿಂಗ್ ನಿಶಾ ನರಸಪ್ಪ ವಂಚನೆ ಮಾಡಿರುವ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ, ಮಕ್ಕಳಿಗೆ ಚಾನ್ಸ್ ಕೊಡಿಸುತ್ತೇನೆ ಎಂದು ಪೋಷಕರ ಬಳಿ ಲಕ್ಷ ಲಕ್ಷ ಪೀಕಿ ಈಗ ಉಂಡೆನಾಮ ಹಾಕಿದ್ದಾಳೆ. ಈ ಬಗ್ಗೆ ಪುಟಾಣಿ ವಂಶಿಕಾ ತಾಯಿ ಯಶಸ್ವಿನಿ ಆನಂದ್ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಯಶಸ್ವಿನಿ ಆನಂದ್ ನಿಶಾ ಹಿಂದೆ ಭಾರೀ ಪ್ರಭಾವಿ ವ್ಯಕ್ತಿಗಳಿದ್ದಾರೆಂದು ಬಾಂಬ್ ಸಿಡಿಸಿದ್ದಾರೆ. ಈಕೆ ಪೀಕಿದ್ದು ಸಾವಿರ ರೂ. ಅಲ್ಲ ಲಕ್ಷ ಲಕ್ಷ ಹಣ ತಿಂದಿದ್ದಾಳೆ ಹಾಗೆ ನನ್ನ ಮಗಳ ಹೆಸರು ಬಳಸಿಕೊಂಡು ಅಮಾಯಕ ಜನರಿಗೆ ಮೋಸ ಕೂಡ ಮಾಡಿದ್ದಾಳೆ. ಇವಳನ್ನ ಹೀಗೆ ಬಿಟ್ರೆ ಇನ್ನೂ ಎಷ್ಟೋ ಜನರಿಗೆ ಮೋಸ ಮಾಡಬಹುದು ಇವಳಿಗೆ ತಕ್ಕ ಪಾಠ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ:
ಚಾನ್ಸ್ ಕೊಡಿಸುವ ನೆಪದಲ್ಲಿ ಮಕ್ಕಳ ಪೋಟೋ ಶೂಟ್ ಮಾಡಿಸಿ ಹಣ ಪೀಕುತ್ತಿದ್ದಳು. ಮಾಸ್ಟರ್ ಆನಂದ್ ಮಗಳು ವಂಶಿಕ ಹೆಸರು ಬಳಸಿ ವಂಚನೆ ಮಾಡುತ್ತಿದ್ದಳು. ಹೀಗಾಗಿ, ವಂಶಿಕ ತಾಯಿ ಯಶಸ್ವಿನಿ ಆನಂದ್ ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆ್ಯಡ್ ಶೂಟ್, ಟಿವಿ ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ ಹಾಗೂ ಖಾಸಗಿ ಚಾನಲ್ ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡಲಾಗುತ್ತಿತ್ತು. ನಿಮ್ಮ ಮಕ್ಕಳಿಗೆ ಚಾನ್ಸ್ ಕೊಡಿಸುತ್ತೇನೆ ಎಂದು ನೂರಾರು ಪೋಷಕರಿಂದ ಈ ಮಹಿಳೆ ಲಕ್ಷಾಂತರ ರೂ. ಹಣ ಪಡೆದ್ದಾಳೆ.