ದೊಡ್ಡಬಳ್ಳಾಪುರ: ತಡ ರಾತ್ರಿ ಶಾಸಗಿ ಶಾಲೆ ಮತ್ತು ಶನಿಮಹಾತ್ಮ ದೇವಾಲಯದಲ್ಲಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ..
ಗ್ರಾಮದಲ್ಲಿರುವ ಎಸ್ ಎಲ್ ಆರ್ ಎಸ್ ಖಾಸಗಿ ಶಾಲೆಗೆ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ಕಪಾಟುಗಳನ್ನು ತೆಗೆದು ಕಡತಗಳನ್ನು ಎಸೆದಿದ್ದಾರೆ. ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು 21 ಸಾವಿರ ನಗದು ಜೊತೆ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ಗಳನ್ನು ಸಂಗ್ರಹಿಸಿಟ್ಟಿದ್ದ ಡಿವಿಆರ್ ಬಾಕ್ಸ್ ಕದ್ದು ಪರಾರಿಯಾಗಿದ್ದಾರೆ.
ಅದೆ ರಾತ್ರಿ ಶನಿ ಮಹಾತ್ಮ ದೇವಾಲಯದ ಬಾಗಿಲು ಮುರಿದು ಕಾಣಿಕೆ ಹುಂಡಿಯನ್ನು ಹಾಗೂ ಬೆಲಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರೆ..
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ…