ಇಂದಿನ ದಿನಗಳಲ್ಲಿ ಮಕ್ಕಳನ್ನು ಪಡೆಯಲು ದಂಪತಿಗಳು ಸಾಕಷ್ಟು ಕಷ್ಟ ಪಡುತ್ತಿದ್ದಾರೆ, ಆದರೆ ಮಕ್ಕಳಾಗುವ ವಿಚಾರದಲ್ಲಿ ಹಾಗೂ ಫಲವತ್ತತೆ ಯ ವಿಚಾರ ಬಂದಾಗ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಅನಿವಾರ್ಯವಾಗಿದೆ.
ಪುರುಷರು ಮತ್ತು ಮಹಿಳೆಯರು ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಗಮನ ಕೊಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಈ ಲೇಖನದಲ್ಲಿ ವೀರ್ಯಾಣುಗಳ ಹಾಗೂ ಅಂಡಾಶಯಗಳ ಸಂತತಿಯನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ ಬನ್ನಿ..
ತಾಜಾ ಹಣ್ಣುಗಳು
- ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ತಾಜಾ ಹಣ್ಣುಗಳು ಪುರುಷರ ವೀರ್ಯಾಣುಗಳ ಗುಣಮಟ್ಟವನ್ನು ಹಾಗೂ ಮಹಿಳೆಯರ ಅಂಡಾಶಯಗಳ ಪ್ರಮಾಣವನ್ನು ಹೆಚ್ಚು ಮಾಡುತ್ತವೆ.
- ಒಂದು ವೇಳೆ ಮಗು ಪಡೆಯಬೇಕು ಎಂದು ನೀವು ಅಂದು ಕೊಂಡರೆ ನಿಮ್ಮ ಆಹಾರ ಪದ್ಧತಿಯಲ್ಲಿ ಕಿತ್ತಳೆ ಹಣ್ಣು, ಮಾವಿನ ಹಣ್ಣು, ಮೂಸಂಬಿ ಹಣ್ಣು ಇತ್ಯಾದಿಗಳನ್ನು ಸೇರಿಸಿ ಸೇವಿಸಿ. ಏಕೆಂದರೆ ಇವುಗಳಲ್ಲಿ ವಿಟಮಿನ್ ಸಿ ಪ್ರಮಾಣ ಮತ್ತು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ.
- ಅದರಲ್ಲೂ ದಾಳಿಂಬೆ ಹಣ್ಣನ್ನು ಮಾತ್ರ ಮರೆಯ ಬಾರದು. ಏಕೆಂದರೆ ಇದು ಪುರುಷರ ವೀರ್ಯಾಣುಗಳ ಗುಣಮಟ್ಟ ಮತ್ತು ಲೈಂಗಿಕ ಹಾರ್ಮೋನ್ ವೃದ್ಧಿಸುತ್ತದೆ. ಐವಿಎಫ್ ಚಿಕಿತ್ಸೆಗೆ ಒಳಗಾಗಿರುವವರು ಕೂಡ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು ಎನ್ನುವುದು ಆರೋಗ್ಯ ತಜ್ಞರ ಮಾತು.
ಬೆಳ್ಳುಳ್ಳಿ
- ಬೆಳ್ಳುಳ್ಳಿ ತನ್ನಲ್ಲಿ ಸಾಕಷ್ಟು ಔಷಧೀಯ ಗುಣಲಕ್ಷಣ ಗಳನ್ನು ಒಳಗೊಂಡಿದ್ದು ಪುರುಷರ ಲೈಂಗಿಕ ಆರೋಗ್ಯಕ್ಕೆ ಹೇಳಿ ಮಾಡಿಸಿದ ನೈಸರ್ಗಿಕ ಆಹಾರ ಉತ್ಪನ್ನವಾಗಿದೆ.
- ಇದು ಜನಾಂಗಗಳ ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರ ಉಂಟು ಮಾಡುವ ಜೊತೆಗೆ ವೀರ್ಯಾಣುಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ.
- ಆದರೆ ಒಂದು ದಿನಕ್ಕೆ ಎರಡರಿಂದ ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಮಾತ್ರ ಸೇವಿಸುವುದು ಒಳ್ಳೆಯದು. ಇದರಿಂದ ಲೈಂಗಿಕ ಆರೋಗ್ಯ ಹಾಗೂ ಹೃದಯದ ಆರೋಗ್ಯ ಕೂಡ ಹೆಚ್ಚಾಗುತ್ತದೆ.
ಮೀನು
- ಮೀನು ತನ್ನಲ್ಲಿ ಪುರುಷರ ಜನನಾಂಗದ ಆರೋಗ್ಯವನ್ನು ವೃದ್ಧಿಸುವ ಜೊತೆಗೆ ದೇಹದ ತುಂಬಾ ರಕ್ತ ಸಂಚಾರವನ್ನು ಹೆಚ್ಚಾಗಿಸುವ ಗುಣವನ್ನು ಹೊಂದಿದೆ.
- ಪುರುಷರ ವೀರ್ಯಾಣುಗಳ ಸಂಖ್ಯೆ ಮೀನು ಸೇವನೆ ಮಾಡುವುದರಿಂದ ಹೆಚ್ಚಾಗುತ್ತದೆ. ಮಕ್ಕಳು ಪಡೆಯ ಬೇಕು ಎನ್ನುವ ದಂಪತಿಗಳು ಒಂದು ವೇಳೆ ಮಾಂಸಹಾರಿ ಗಳಾಗಿದ್ದರೆ, ಮೀನು ಸೇವನೆಯನ್ನು ಅಭ್ಯಾಸ ಮಾಡಿ ಕೊಳ್ಳುವುದು ಒಳ್ಳೆಯದು.
ಮಹಿಳೆಯರ ಫಲವತ್ತತೆ ಹೆಚ್ಚಿಸುವ ಆಹಾರಗಳು
- ಹಸಿರು ಎಲೆ ತರಕಾರಿಗಳು ಮತ್ತು ಡೈರಿ ಉತ್ಪನ್ನ ಗಳು:ತರಕಾರಿಗಳು ಹಾಗೂ ಹಸಿರು ಸೊಪ್ಪುಗಳು ತಮ್ಮಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಾಗಿ ಒಳಗೊಂಡಿ ರುತ್ತವೆ. ಹಾಗಾಗಿ ಮಹಿಳೆಯರು ಇವುಗಳನ್ನು ಸೇವಿಸುವುದರಿಂದ 32% ಫಲವತ್ತತೆ ಹೆಚ್ಚಾಗುವ ಸಾಧ್ಯತೆ ಇದೆ.
- ದೇಹಕ್ಕೆ ಮತ್ತಷ್ಟು ಪ್ರೋಟಿನ್ ಅಂಶವನ್ನು ಪಡೆದು ಕೊಳ್ಳಲು ಡೈರಿ ಉತ್ಪನ್ನಗಳನ್ನು ಸಹ ಸೇವಿಸುವುದು ಒಳ್ಳೆಯದು. ಇದ ರಿಂದ ಗರ್ಭಕೋಶದ ಆರೋಗ್ಯ ವೃದ್ಧಿಸುತ್ತದೆ ಮತ್ತು ಅಂಡಾಶಯಗಳ ಸಂಖ್ಯೆ ಹೆಚ್ಚಾಗುತ್ತದೆ.
ಬೀಜಗಳು
ಬಾದಾಮಿ ಮತ್ತು ವಾಲ್ನಟ್ ಬೀಜಗಳು ಸಹ ಮಹಿಳೆಯರ ಜನನಾಂಗದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಟಮಿನ್ ಇ ಇವುಗಳಲ್ಲಿ ಹೆಚ್ಚಾಗಿರುವುದರಿಂದ ಮಹಿಳೆಯರ ಅಂಡಾಶ ಯಗಳ ಆರೋಗ್ಯ ವೃದ್ಧಿಸುತ್ತದೆ. ಇದು ಅಬಾರ್ಷನ್ ಆಗುವ ಸಾಧ್ಯತೆಯನ್ನು ತಡೆಗಟ್ಟುತ್ತದೆ.
ಆಲೂಗಡ್ಡೆ
- ವಿಟಮಿನ್ ಬಿ ಮತ್ತು ವಿಟಮಿನ್ ಇ ಅಂಶವನ್ನು ಹೆಚ್ಚಾಗಿ ಒಳಗೊಂಡಿರುವ ಆಲೂಗಡ್ಡೆ ಭ್ರೂಣದ ಬೆಳವಣಿಗೆ ಯಲ್ಲಿ ಸಹಾಯಮಾಡುತ್ತದೆ.
- ಜೀವಕೋಶಗಳ ಸಂತತಿ ಹೆಚ್ಚು ಮಾಡುವ ಜೊತೆಗೆ ಬೇಯಿಸಿದ ಆಲೂಗಡ್ಡೆ ತಿನ್ನುವುದರಿಂದ ಆಬಾರ್ಷನ್ ಆಗುವ ಸಾಧ್ಯತೆ ಕಡಿಮೆಯಾಗುತ್ತದೆ. ಹೀಗಾಗಿ ಗರ್ಭಾ ವಸ್ಥೆಯಲ್ಲಿ ಮಹಿಳೆಯರಿಗೆ ಆಲೂಗಡ್ಡೆ ತುಂಬಾ ಒಳ್ಳೆಯದು.
ಕೋಳಿ ಮೊಟ್ಟೆ
- ಕೋಳಿ ಮೊಟ್ಟೆ ತನ್ನಲ್ಲಿ ವಿಟಮಿನ್ ಬಿ 12 ಮತ್ತು ಪೋಲೆಟ್ ಅಂಶವನ್ನು ಹೆಚ್ಚಾಗಿ ಒಳಗೊಂಡಿದ್ದು ಗರ್ಭಿಣಿ ಮಹಿಳೆಯರ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳನ್ನು ಸಹ ಒಳ ಗೊಂಡಿದೆ.
- ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳ ವಾಗಿದ್ದು ಮಹಿಳೆಯರ ಫಲವತ್ತತೆಯನ್ನು ಹೆಚ್ಚು ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.