ಬೆಂಗಳೂರು ;- ಕಾಂಗ್ರೆಸ್ ಅವಧಿಯಲ್ಲಿ ಕೊಲೆ ಹೆಚ್ಚಾಗಿವೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ತುಮಕೂರಿನಲ್ಲಿ ಮಾತನಾಡಿದ ಅವರು, ನಾವು 136 ಸೀಟ್ ಗೆದ್ದ ಜೋಶ್ನಲ್ಲಿದ್ದೇವೆ. ಅದೇ ಅವರನ್ನು ಗೆಲ್ಲಿಸಲಿಲ್ಲ, ಆದ್ದರಿಂದ ಅವರಿಗೆ ಹೊಟ್ಟೆಉರಿ ಇರಬಹುದು. ಅದಕ್ಕೆ ಆ ರೀತಿಯಲ್ಲಿ ಮಾತನಾಡುತ್ತಾರೆ. ಅವರ ಸರ್ಕಾರ ಇದ್ದಾಗ ಎಷ್ಟುಕೊಲೆಯಾಗಿದೆ, ಎಷ್ಟುರೇಪ್ ಆಗಿದೆ, ಕ್ರಿಮಿನಲ. ಕೇಸ್ಗಳು ಆಗಿವೆ ಎಂಬ ಲೆಕ್ಕ ಕೊಡುತ್ತೇನೆ ಎಂದ ಅವರು ನಮ್ಮ ಸರ್ಕಾರದಲ್ಲಿ ಯಾರೇ ಕೊಲೆ ಮಾಡಲಿ ಮತ್ತೊಂದು ಮಾಡಲಿ. ಕೂಡಲೇ ಹಿಡಿದು ಶಿಕ್ಷೆ ಮಾಡುತ್ತಿದ್ದೇವೆ ಎಂದರು. ಜೈನ ಮುನಿಗಳನ್ನ ಕೊಂದವರನ್ನು 6 ಗಂಟೆಯಲ್ಲಿ ಹಿಡಿದು ಕೋರ್ಚ್ಗೆ ಒಪ್ಪಿಸಿದ್ದಾಗಿ ತಿಳಿಸಿದ ಅವರು ಅದರ ಬಗ್ಗೆ ತನಿಖೆ ನಡಿತಿದೆ. ಬೆಂಗಳೂರಿನಲ್ಲಿ ಜೋಡಿ ಕೊಲೆ ಆಯ್ತು. ಅವರನ್ನು 7 ಗಂಟೆಯಲ್ಲಿ ಕುಣಿಗಲ. ಬಳಿ ಬಂಧಿಸಿದ್ದಾಗಿ ತಿಳಿಸಿದರು. ಸುಮ್ಮನೆ ಲಾ ಆಂಡ್ ಆರ್ಡರ್ ಹಾಳಾಗಿ ಹೋಗಿದೆ ಅಂತ ಹೇಳಿಕೆ ಕೊಡುತ್ತಿರುವ ಅವರ ಕಾಲದಲ್ಲಿ ಏನಾಗುತ್ತಿತ್ತು ಅಂತ ಎಲ್ಲಾ ಬಿಡಿಸಿ ಹೇಳುವುದಾಗಿ ತಿಳಿಸಿದರು.