ಕೋಲಾರ ;- ಸತತವಾಗಿ 60 ವರ್ಷಗಳನ್ನು ಆಳ್ವಿಕೆ ಮಾಡಿರುವಂತಹ ಕಾಂಗ್ರೆಸ್ ಪಕ್ಷ ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಚುನಾವಣೆಯಲ್ಲಿ ಗೆದ್ದಿರುವಂತದ್ದು ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದರು.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಜೂನಿಯರ್ ಕಾಲೇಜು ಬಳಿ ಅನ್ನಭಾಗ್ಯ ಯೋಜನೆಯ ನಗದು ಸಮಾವೇಶದಲ್ಲಿ ಭಾಗವಹಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ್ರು. 2023 ರ ಚುನಾವಣೆಯಲ್ಲಿ ೫ ಗ್ಯಾರಂಟಿಗಳನ್ನು ಕೊಟ್ಟು ಕಂಡಿಷನ್ ಗಳನ್ನು ಹಾಕಿ ೧೦ ಕೆಜಿ ಅಕ್ಕಿ ಕೊಡುತ್ತೆವೆ ಅಂತ ಹೇಳಿ ೫ ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಗುಡುಗಿದರು.
ಅಲ್ಲದೆ ಮಾಲೂರು ತಾಲೂಕಿನಲ್ಲಿ ೧೦೦೦೦ ಸಾವಿರ ರೇಷನ್ ಕಾರ್ಡ್ ದಾರರಿಗೆ ಇದರ ಸೌಲಭ್ಯ ಸಿಕ್ಕಿಲ್ಲ ಚುನಾವಣಾ ಸಂದರ್ಭದಲ್ಲಿ ೫ ಗ್ಯಾರಂಟಿಗಳನ್ನು ಆಶ್ವಾಸನೆಗಳನ್ನು ಕೊಟ್ಟಿದ್ದರು ಅದು ಕಾಂಗ್ರೆಸ್ ನ ಪ್ರಣಾಳಿಕೆಯಾಗಿತ್ತು ಬಿಜೆಪಿ ಪ್ರಣಾಳಿಕೆಯಾಗಿರಲಿಲ್ಲ ನರೇಂದ್ರ ಮೋದಿಯವರನ್ನು ಕೇಳಿ ಚುನಾವಣಾ ಮ್ಯಾನಿಫೆಸ್ಟ್ ಮಾಡಿರಲಿಲ್ಲ ಇವತ್ತು ೫ ಕೆಜಿ ಅಕ್ಕಿ ಕೊಡುತ್ತೆವೆ ಅಂತ ಹೇಳಿದ್ದಾರೆ ಅದನ್ನು ಹತ್ತು ಕೆಜಿ ಕೆಜಿ ಅಕ್ಕಿ ಕೊಡುವವರೆಗು ನಿರಂತರ ಹೋರಾಟವನ್ನು ಭಾರತೀಯ ಜನತಾ ಪಾರ್ಟಿ ಸರ್ಕಾರ ಹೋರಾಡುತ್ತದೆ ಎಂದು ತಿಳಿಸಿದ್ರು.
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ, ನೀಡಿದರು. ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಸಂಸದ ಮುನಿಸ್ವಾಮಿ, ಮಾಲೂರು ಶಾಸಕ ಕೆ.ವೈ ನಂಜೇಗೌಡ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದರು