ಇತ್ತೀಚೆಗೆ ಬಹುತೇಕ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಹೊಟ್ಟೆ ಬೊಜ್ಜು ಕೂಡ ಒಂದಾಗಿದೆ. ಬದಲಾದ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಹೊಟ್ಟೆಯ ಬೊಜ್ಜು ಅತೀಯಾಗಿ ಕಾಣಿಸಿಕೊಂಡರೆ ಮಧುಮೇಹದಿಂದ ಹಿಡಿದು ಹೃದಯದ ಸಮಸ್ಯೆ, ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹಾಗಾದ್ರೆ ನಾವು ಈ ಸಮಸ್ಸೆಯಿಂದ ಬಜಾವ್ ಆಗಲು ಕೆಲವೊಂದು ಬದಲಾವಣೆ ನಮ್ಮ ಡೈಲಿ ರೊಟಿನ್ ಮಾಡಿಕೊಳ್ಳಬೇಕು.
ಬೊಜ್ಜು ಕರಗಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
1.ಸ್ವೀಟ್ಸ್ ಸ್ವಲ್ಪ ಕಡಿಮೆ ತಿನ್ನಿ..
ಸಾಮಾನ್ಯವಾಗಿ ಹೊಟ್ಟೆಯ ಕೊಬ್ಬು ಹೆಚ್ಚಾಗಲು ಕಾರಣ ಪ್ರತಿದಿನ ಸೇವಿಸುವ ಸಿಹಿ ಪದಾರ್ಥಗಳು..! ಹಾಗಾಗಿ ಸಕ್ಕರೆ ಮಿಶ್ರಿತ ಸ್ವೀಟ್ಸ್ಗಳನ್ನ ಕಡಿಮೆ ತಿನ್ನಿ
- ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಲಿಂಬೆ ನೀರು ಕುಡಿಯಿರಿ
ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಲಿಂಬೆಯ ರಸವನ್ನು ಸೇರಿಸಿ ದಿನಾ ಖಾಲಿ ಹೊಟ್ಟೆಗೆ ಸೇವಿಸಿ
3.ಜೀರಿಗೆ ನೀರು ಸೇವನೆ ಮಾಡಿ
ಒಂದೆರಡು ಟೀ ಚಮಚ ಜೀರಿಗೆಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ ಕುದಿಸಿ, ಉಗುರು ಬೆಚ್ಚಗಿರುವಾಗಲೇ ಪ್ರತಿದಿನ ಒಂದೊಂದು ಲೋಟ ಕುಡಿಯುತ್ತಾ ಬಂದರೆ ಕಿಬ್ಬೊಟ್ಟೆ ಹಾಗೂ ಸೊಂಟದ ಸುತ್ತಲೂ ಶೇಖರಣೆ ಗೊಂಡ ಕೊಬ್ಬು ಸುಲಭವಾಗಿ ಕರಗಿಸುತ್ತದೆ
4.ದಿನಕ್ಕೆ ಎರಡು ಗ್ಲಾಸ್ ಗ್ರೀನ್ ಟೀ ಕುಡಿಯಿರಿ
ಪ್ರತಿ ದಿನ ಎರಡು ಗ್ಲಾಸ್ ಹಾಲಿಲ್ಲದ ಗ್ರೀನ್ ಟೀ ಸೇವಿಸಿದರೆ, ದೇಹದ ತೂಕ ಕಡಿಮೆಯಾಗುವುದರ ಜೊತೆಗೆ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.
- ಶುಂಠಿ ಟೀ ಕುಡಿಯಿರಿ
ಹಸಿ ಶುಂಠಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.