ಬೆಂಗಳೂರು ;– ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಟ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಎರಡು ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಇಲ್ಲಿಯವರೆಗೆ ಸಿದ್ದರಾಮಯ್ಯ ಅವರು ಸರ್ಕಾರದ ಅಧಿಕೃತ ನಿವಾಸಕ್ಕೆ ತೆರಳಿಲ್ಲ. ಈ ಹಿಂದಿನ ಅವಧಿಯಲ್ಲಿ ಸಿಎಂ ಆಗಿದ್ದಾಗ ಮೂಡನಂಬಿಕೆಗಳ ವಿರೋಧಿ ಕಾನೂನು ಜಾರಿಗೆ ತರಲು ಮುಂದಾಗಿದ್ದರು. ಆದರೆ, ಈಗ ಅವರೇ ಮೂಢನಂಬಿಕೆಗಳನ್ನು ಆಚರಣೆ ಮಾಡುತ್ತಿದ್ದಾರೆ. ಆಷಾಢ ಮಾಸವಿದ್ದ ಕಾರಣ ಈ ಮಾಸ ಅಶುಭವೆಂದು ಮನೆಯನ್ನು ಬದಲಿಸದೇ ಮುಂದಿನ ತಿಂಗಳಲ್ಲಿ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ರೀತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ನಟ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ.
ಆಷಾಢದ ‘ಅಶುಭ’ ಅವಧಿಯ ನಂತರ ಹೊಸ ಮನೆಗೆ ಶಿಫ್ಟ್ ಆಗಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ನಿಜವಾದ ವೈಜ್ಞಾನಿಕ ಚಿಂತಕನಿಗೆ ಇಂತಹ ಮೂಢನಂಬಿಕೆಯ ಕಾಳಜಿಗಳು ಏಕೆ ಬೇಕು? 2 ತಿಂಗಳ ಹಿಂದೆ ‘ದೇವರ’ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದರು ಈಗ ಆಷಾಢ ಅಸಂಬದ್ಧತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಂದ್ರಯಾನ-3 ಇದರ ಕೆಲವು ವಿಜ್ಞಾನಿಗಳ ಬೂಟಾಟಿಕೆಯ ಜೊತೆಗೆ ಸ್ಪರ್ಧೆ ಮಾಡುತ್ತಿದ್ದಾರ?” ಎಂದು ಟೀಕೆ ಮಾಡಿದ್ದಾರೆ.