ಬೆಂಗಳೂರು ;– ಬಾಗಲೂರು ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪತ್ನಿಯನ್ನು ಕೊಲ್ಲಲು ಅಪಘಾತವೆಸಗಿದ್ದ ಪಾಪಿ ಪತಿ ಹಾಗೂ ಮತ್ತೋರ್ವ ಆರೋಪಿಯನ್ನು 6 ತಿಂಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರವಿಂದ ಹಾಗೂ ಉದಯ್ ಕುಮಾರ್ ಬಂಧಿತರು ಎಂದು ತಿಳಿದು ಬಂದಿದೆ. ಹೊಸ ವರ್ಷದ ದಿನದಂದೇ ಬಾಗಲೂರಿನ ಕೆಐಡಿಬಿ ಲೇಔಟ್ನಲ್ಲಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆಕೆಯ ಪತಿ ಅರವಿಂದ್ ಹಾಗೂ ಆತನ ಸಹಚರ ಉದಯ್ ಕುಮಾರ್ ಎಂಬಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಅರವಿಂದ ಮತ್ತು ಚೈತನ್ಯ ದಂಪತಿ ಮಧ್ಯೆ ಕೌಟುಂಬಿಕ ಕಲಹ ಆರಂಭವಾಗಿತ್ತು. ತನ್ನ ತಂದೆ ತಾಯಿಯನ್ನು ಪತ್ನಿ ಚೈತನ್ಯ ಅವರೇ ತನ್ನಿಂದ ದೂರ ಮಾಡಿದರು ಎಂದು ಅರವಿಂದ್ ಕೋಪಗೊಂಡಿದ್ದ. ಇದೇ ಕೋಪದಿಂದ ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪತ್ನಿಯನ್ನು ಪೀಡಿಸಲಾರಂಭಿಸಿದ್ದ. ಆದರೆ ವಿಚ್ಛೇದನ ನೀಡಲು ಚೈತನ್ಯ ಒಪ್ಪಿರಲಿಲ್ಲ. ಹಾಗಾಗಿ ಆಕೆಯನ್ನು ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅಪಘಾತವಾದಂತೆ ಕೊಲೆ ಮಾಡಲು ಪ್ಲಾನ್ ರೂಪಿಸಿಕೊಂಡು ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಕಾರು ಖರೀದಿಸಿದ್ದ. ಅದಕ್ಕೆಂದೇ ಉದಯ್ ಕುಮಾರ್ ಎಂಬ ಚಾಲಕನನ್ನು ನೇಮಿಸಿಕೊಂಡಿದ್ದ. ತನ್ನ ಪತ್ನಿಗೆ ಅಪಘಾತ ಮಾಡಬೇಕು ಎಂದು ಅರವಿಂದ್ ಹೇಳಿದಾಗ ಮರುಮಾತನಾಡದೇ ಉದಯ್ ಕುಮಾರ್ ಒಪ್ಪಿಕೊಂಡಿದ್ದ. ಕಾರಣವೇನೆಂದರೆ ಉದಯ್ ದಾಂಪತ್ಯದಲ್ಲಿಯೂ ಕೌಟುಂಬಿಕ ಕಲಹದಿಂದ ವಿಚ್ಛೇದನದ ಮಾತುಕತೆ ನಡೀತಿತ್ತು. ‘ಎಲ್ಲರ ಪತ್ನಿಯರೂ ಒಂದೇ, ಕೊಂದೇ ಬಿಡೋಣ’ ಎಂಬ ತೀರ್ಮಾನಕ್ಕೆ ಉದಯ್ ಬಂದುಬಿಟ್ಟಿದ್ದ. ಬಳಿಕ ಚೈತನ್ಯ ಒಂಟಿಯಾಗಿ ಎಲ್ಲೆಲ್ಲಿ ಸಿಗಬಹುದು? ಸಿಸಿಟಿವಿ ಇರದ ಸ್ಥಳಗಳು ಯಾವುವು? ಎಂದು ಇಬ್ಬರೂ ಸಹ ವಾಚ್ ಮಾಡಿದ್ದರು