ಬಿಡಿಎನಲ್ಲಿ ಬಿಲಗಳನ್ನ ತೋಡಿಕೊಂಡು ಹೆಗ್ಗಣಗಳು ಸಿಕ್ಕಪಟ್ಟೆ ಮೆಯ್ದಿದಿವೆ.ಇದೀಗ ಭ್ರಷ್ಟ ಅಧಿಕಾರಿಗಳ ಭೇಟೆಗೆ ಸರ್ಕಾರ ಮುಂದಾಗಿದೆ.ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಾಂತರ ರೂ ಹಗರಣಗಳ ತನಿಖೆಗೆ ಸರ್ಕಾರ ಎಸ್ಐಟಿ ರಚನೆಗೆ ಮುಂದಾಗಿದೆ. ಇದರಿಂದ ಕೋಟಿ ಕೋಟಿ ನುಂಗಿದವರಿಗೆ ಚಳಿ ಜ್ವರ ಬರೋದಕ್ಕೆ ಶುರುವಾಗಿದ್ದು, ದೊಡ್ಡ ದೊಡ್ಡ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಳಿಗೆ ನಡುಕ ಹುಟ್ಟಿಸಿದೆ..ಹಾಗಾದ್ರೆ ಯಾವೆಲ್ಲಾ ಹಗರಣಗಳು ತನಿಖೆಯಾಗಲಿ ಅನ್ನೋದನ್ನ ತೋರಿಸುತ್ತೇವೆ ಈ ಕಂಪ್ಲೀಟ್ ರಿಪೋರ್ಟ್ ನಲ್ಲಿ.
ಬಿಡಿಎ ಇದು ಭ್ರಷ್ಟರ ಸಾಮಾಜ್ರ್ಯ.ಇಲ್ಲಿ ನಡೆಯುವ ಅಕ್ರಮಗಳು ಒಂದಲ್ಲ ಎರಡೆರಡು ಅಲ್ಲ ಬಿಡಿ.ಸಾರ್ವಜನಿಕ ಸ್ವತ್ತನ್ನ ಗುಳಂ ಮಾಡೋದಕ್ಕೆ ಅಂತ ಇಲ್ಲಿಗೆ ಅಧಿಕಾರಿಗಳು ಬರುತ್ತಾರೆ.ಇದೀಗ ಇಲ್ಲಿ ನಡೆದಿರುವ ಹಗರಣಗಳನ್ನ ತನಿಖೆ ನಡೆಸಿ, ಭ್ರಷ್ಟರನ್ನ ಬೀದಿಗೆ ತರಲು ಸರ್ಕಾರ ಮುಂದಾಗಿದೆ.. ಕಳೆದ ಹತ್ತು ವರ್ಷಗಳಲ್ಲಿ ನಡೆಇದಿದೆ ಎನ್ನಲಾದ ಹಗರಣಗಳ ತನಿಖೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ.
ಹೌದು ಕಳೆದ ಹಲವು ವರ್ಷಗಳದಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಿವೇಶನಗಳನ್ನ ಅಧಿಕಾರಿಗಳು ಏಜೆಂಟರ ಜತೆ ಶಾಮೀಲಾಗಿ ಪಟ್ಟಭ್ರದ್ರ ಹಿತಾಶಕ್ತಿಗಳಿಗೆ ಮಾರಾಟ ಮಾಡಿರುವ ಆರೋಪ ಇದೆ.ಇದು ಬಿಡಿಎಗೆ ಕಪ್ಪುಚುಕ್ಕಿಯಾಗಿ ಮಾರ್ಪಟ್ಟಿದೆ. ಇದರಿಂದ ಅಧಿಕಾರಿಗಳ ಕಳ್ಳಾಟದಿಂದ ಸಾರ್ವಜನಿಕರಲ್ಲಿ ಬಿಡಿಎಗೆ ಇದ್ದ ವಿಶ್ವಾಶ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಎನ್ನಲಾದ ಹಗರಣಗಳನ್ನ ತನಿಖೆ ನಡೆಸಲು ವಿಶೇಷ ತಂಡ ರಚನೆಯಾಗಲಿದೆ. ಈ ಸಂಬಂಧ ಎಸ್ ಐ ಟಿ ಗೆ ವಹಿಸಲಾಗುವ ಹಗರಣಗಳ ಪಟ್ಟಿಗಳನ್ನ ರೆಡಿಮಾಡಿಕೊಳ್ತಿದೆ. ..
ಯಾವೆಲ್ಲಾ ಹಗರಣಗಳು ಎಸ್ಐಟಿ ಹೆಗಲಿದೆ..?
ಸಗಟು ಸೈಟ್ ಹಂಚಿಕೆ ಹೆಸರಿನಲ್ಲಿ ನಡೆದಿರುವ ಕೋಟ್ಯಾಂತರ ರೂಪಾಯಿ ಹಗರಣ
– ಕಾರ್ನರ್ ಸೈಟ್ ಹಂಚಿಕೆಯಲ್ಲಿ ಕೋಟಿ ಕೋಟಿ ಅಕ್ರಮ ಅರೋಪ ಕೇಸ್
– ಸಿಎ ಸೈಟ್ ಗಳನ್ನ ಅಕ್ರಮವಾಗಿ ಹಂಚಿಕೆ ಮಾಡಿರೋ ಆರೋಪ
– ಟಿಟಿಆರ್ ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂ ಹಗರಣ
– ಟ್ರಿನಿಟಿ ಅಸೋಸಿಯೇಷನ್ ಗೆ ಅಕ್ರಮವಾಗಿ 35 ಸೈಟ್ ಹಂಚಿಕೆ ಮಾಡಿ 100 ಕೋಟಿ ಲೂಟಿ
– ಕೆಂಪೇಗೌಡ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ನಕಲಿ ರೈತರಿಗೆ ಪರಿಹಾರ
– ಖಾಲಿ ಜಾಗಕ್ಕೆ ಫೆನ್ಸಿಂಗ್ ಹಾಕುತ್ತೇವೆ ಅಂತ ಲೂಟಿ ಕೇಸ್
-ಭೂಸ್ವಾದೀನಾ ವಿಭಾಗದಲ್ಲಿ ಒಂದೇ ಜಾಗಕ್ಕೆ ಎರಡೆರೆಡು ಬಾರಿ ಪರಿಹಾರ\
ಕೆಂಪೇಗೌಡ ಬಡಾವಣೆ ಅಭಿವೃದ್ದಿಗೆ ಕರೆಯಲಾದ ಟೆಂಡರ್ ಗೋಲ್ಮಾಲ್
ಬಿಡಿಎ ನಲ್ಲಿ ನಡೆದಿರುವವ ಹತ್ತಕ್ಕಿಂತ ಹೆಚ್ಚು ಕೇಸ್ ಗಳನ್ನ ಎಸ್ಐಟಿ ಹೆಗ್ಗಲಿಗೆ ಹಾಕಲು ಸರ್ಕಾರ ತೀರ್ಮಾನ ,ಮಾಡಿದೆ.ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಿ ಮತ್ತೆ ಬಿಡಿಎ ಯನ್ನ ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಎಲ್ಲಾ ಪ್ರಯತ್ನಗಳು ನಡೆಯುತ್ತಿದೆ.ಕೂಡಲೇ ಬಿಡಿಎ ಸಂಪತ್ತುನ್ನ ಲೂಟಿ ಮಾಡಿದವರಿಗೆ ಶಿಕ್ಷೆ ಆಗಲಿ ಅನ್ನೋದು ಸಾಮಾಜಿಕ ಕಾರ್ಯಕರ್ತರ ಆಗ್ರಹವಾಗಿದೆ.ಒಟ್ಟಿನಲ್ಲಿ ಬಿಡಿಎ ಸಂಪತ್ತುನ್ನ ಲೂಟಿ ಮಾಡಿರುವ ಅಧಿಕಾರಿಗಳ ಭೇಟೆಗೆ ಸರ್ಕಾರ ಮುಂದಾಗಿದೆ.. ವಿಶೇಷ ತನಿಖಾ ತಂಡದಿಂದ ಯಾವೆಲ್ಲಾ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.