ಜೀವನ ಶೈಲಿ, ವ್ಯಾಯಾಮದ ಕೊರತೆ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಜನರು ಅಸಿಡಿಟಿ ಸಮಸ್ಯೆಗೆ ಒಳಗಾಗ್ತಿದ್ದಾರೆ.ಈ ಅಸಿಡಿಟಿಯಿಂದ ಹೊಟ್ಟೆ ಉರಿ, ವಾಕರಿಕೆ, ವಾಂತಿ, ತಲೆನೋವು, ಮೈಕೈನೋವು ಸೇರಿದಂತೆ ಅನೇಕ ಸಮಸ್ಯೆ ಶುರುವಾಗುತ್ತದೆ.ಸಿಡಿಟಿ ಸಮಸ್ಯೆಯಿಂದ ಹೊರಗೆ ಬರಬೇಕು ಎನ್ನುವವರು ಪುದೀನಾ ಎಲೆಗಳನ್ನು ಬಳಸಬಹುದು. ಪುದೀನಾ ಎಲೆ ನಿಮ್ಮ ಅಸಿಡಿಟಿ ಸಮಸ್ಯೆಗೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ.
ಪುದೀನಾ ಎಲೆಯಲ್ಲಿರುವ ಪೋಷಕಾಂಶಗಳು
ಪುದೀನಾದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ ಮತ್ತು ಕಿಣ್ವಗಳಂತಹ ಪೋಷಕಾಂಶಗಳು ಕಂಡುಬರುತ್ತವೆ.
ಅಸಿಡಿಟಿ ಸಮಸ್ಯೆಯಿರುವವರು ಪುದೀನಾವನ್ನು ಹೇಗೆ ಸೇವನೆ ಮಾಡಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
- ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆ ತಿನ್ನಿ
- ಪುದೀನಾ ಮತ್ತು ಓಂಕಾಳಿನ ಚಟ್ನಿ ಸೇವನೆ ಮಾಡಬೇಕು
- ಪುದೀನಾ ಟೀ
- ಪುದೀನಾ ಮಜ್ಜಿಗೆ