ಬಹುಭಾಷಾ ನಟಿ ನಿತ್ಯಾ ಮೆನನ್ ಕುಟುಂಬದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ನಿತ್ಯಾ ಅವರ ಪ್ರೀತಿಯ ಅಜ್ಜಿ ಇತ್ತೀಚಿಗೆ ಇಹಲೋಕ ತ್ಯಜಿಸಿದ್ದಾರೆ. ಅಜ್ಜಿಯ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ನಟಿ ನಿತ್ಯಾ ಮೆನನ್ ಭಾವುಕರಾಗಿದ್ದಾರೆ.
ಈ ಮೊದಲು ಅಜ್ಜನನ್ನು ಕಳೆದುಕೊಂಡಿದ್ದ ನಿತ್ಯಾ ಮೆನನ್ ಇದೀಗ ತುಂಬಾ ಪ್ರೀತಿಸುತ್ತಿದ್ದ ಅಜ್ಜಿಯನ್ನು ಕಳೆದುಕೊಂಡಿದ್ದಾರೆ. ಈಗ ಇವರಿಬ್ಬರು ಜೊತೆಗಿಲ್ಲ ಎನ್ನುವುದನ್ನು ನಿತ್ಯಾ ಮೆನನ್ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನೋವಿನಿಂದಾಗಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಅಜ್ಜಿ ಮತ್ತು ಅಜ್ಜನೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರ್ರಿಮನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ ಎಂದು ನಟಿ ಪೋಸ್ಟ್ ಮಾಡಿದ್ದಾರೆ. ತಮ್ಮ ಅಜ್ಜ, ಅಜ್ಜಿಯ ಜೊತೆಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.