ಬೆಂಗಳೂರು : ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಕಾರ್ಯಕ್ರಮಕ್ಕೆ ಮಾಜಿ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು. ಇದು ಫೋಟೋಶೂಟ್ ಅಷ್ಟೇ. ಎಲ್ಲರೂ ಕೈ ಎತ್ತಿ ಫೋಟೋಶೂಟ್ ಮಾಡ್ತಾರೆ, ಹೋಗ್ತಾರೆ ಎಂದು ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವವರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದೀನಿ. ಇದೊಂದು ಫೋಟೋಶೂಟ್ ಅಷ್ಟೆ ಎಂದು ಕುಟುಕಿದರು.
ದಾರಿಯುದಕ್ಕೂ ಫ್ಲೆಕ್ಸ್ಗಳನ್ನು ಹಾಕಿದ್ದಾರೆ, ನೋಡಿದ್ದೇನೆ. ಯುಪಿಎ ಲೀಡರ್ಸ್ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಸಿದ್ಧಾಂತಗಳಿಲ್ಲ. ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡುತ್ತಾರೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಕೇರಳದಲ್ಲಿ ಒಬ್ಬೊರಿಗೊಬ್ಬರು ಜಗಳ ಆಡ್ತಾರೆ. ಅವರಿಗೆ ಟಾರ್ಗೆಟ್ ಇಲ್ಲ, ಅದೊಂದೆ ಅಜೆಂಡಾ ಇರೋದು ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ವಿರುದ್ಧ ನಾವಿದ್ದೇವೆ ಅನ್ನೊದು ಅಷ್ಟೇ ಅವರಿಗೆ. ದೇಶದ ಬಡವರಿಗೆ ಮೋದಿ ಏನು ಅಂತ ಗೊತ್ತಿದೆ. ಮೋದಿ ಅವರಿಂದ ವಿಶ್ವಮಟ್ಟದಲಿ ಭಾರತಕ್ಕೆ ಹೆಸರು ಬಂದಿದೆ. ಚಂದ್ರಯಾನ 3 ಯಶಸ್ವಿಯಾಗಿದೆ. ಫೋಟೋಶೂಟ್ ಅಷ್ಟೆ ಸಭೆಯಿಂದ ಏನು ಉಪಯೋಗ ಆಗೊಲ್ಲ ಎಂದು ಆರ್. ಅಶೋಕ್ ಹೇಳಿದರು.