ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಸುಹೇಲ್, ಉಮರ್, ಜುನೇದ್ ಮುದಾಶೀರ್, ಜಾಹಿದ್ ಬಂಧಿತ ಶಂಕಿತ ಉಗ್ರರರು. ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
2017ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿ ನಡೆದಿದ್ದ ಮೂವರ ಕಿಡ್ನ್ಯಾಪ್, ಓರ್ವನ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಹಲವು ಆರೋಪಿಗಳು, ಪರಪ್ಪನ ಅಗ್ರಹಾರ ಜೈಲಿನಿಂದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಈ ಬಗ್ಗೆ ಐದು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರ್ ಟಿ ನಗರ ಕೊಲೆ ಕೇಸ್ನ ಅರೋಪಿಗಳು ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದಾರೆ. ನಂತರ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದರು. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನು ಒಗ್ಗೂಡಿಸುತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ, ಸಿಸಿಬಿ ಮಾಹಿತಿ ಸಂಗ್ರಹ ಮಾಡಿತ್ತು. ಮಾಹಿತಿ ಅನ್ವಯ ಸಿಸಿಬಿ ಜೊತೆಗೆ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದೆ.
ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ ನಾಪತ್ತೆ
ಕೊಲೆ, ಕಿಡ್ನ್ಯಾಪ್ ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್ ಅಹ್ಮದ್, ಜೈಲಿನಿಂದ ಹೊರಬರುವಾಗ ಶಂಕಿತ ಉಗ್ರನಾಗಿದ್ದ. ಇಂದು ಸಿಸಿಬಿ ಬಂಧಿಸಿದ ಬಹುತೇಕ ಶಂಕಿತ ಉಗ್ರರೆಲ್ಲರೂ ಜುನೈದ್ ತಂಡದವರು. ಆದ್ರೆ, ಪ್ರಕರಣದ ಪ್ರಮುಖ ಆರೋಪಿ ಜುನೈದ್ ಅಹ್ಮದ್ ನಾಪತ್ತೆಯಾಗಿದ್ದಾನೆ.
ಶಂಕಿತ ಉಗ್ರರ ಬಳಿ ಸ್ಪೋಟಕ ವಸ್ತುಗಳು ಪತ್ತೆ..!
1) 4 ವಾಕಿಟಾಕಿ..
2) 7 ಕಂಟ್ರಿ ಮೇಡ್ ಪಿಸ್ತೂಲ್..
3) 42 ಸಜೀವ ಗುಂಡುಗಳು..
4) ಮದ್ದುಗುಂಡುಗಳು..
5 ) 2 ಡ್ಯಾಗರ್..
6 ) 2 ಸೆಟಲೈಟ್ ಫೋನ್ ಗಳು..
7 ) 4 ಗ್ರೆನೈಡ್ ಗಳು ಪತ್ತೆ..