ಬೆಂಗಳೂರು: ನಿರ್ಮಾಪಕ ಎಂಎನ್ ಕುಮಾರ್ ಹಾಗೂ ಸುದೀಪ್ ಮಧ್ಯೆ ಮನಸ್ತಾಪ ಉಂಟಾಗಿದೆ. ಸುದೀಪ್ ಚಿತ್ರಗಳನ್ನು ಕುಮಾರ್ ನಿರ್ಮಾಣ ಮಾಡಿದ್ದರು. ಇಬ್ಬರ ಮಧ್ಯೆ ಗೆಳೆತನ ಇತ್ತು. ಆದರೆ, ಈಗ ಈ ಗೆಳೆತನ ಹಾಳಾಗಿದೆ. ಎಂಎನ್ ಕುಮಾರ್ ಫಿಲ್ಮ್ ಚೇಂಬರ್ ಮೊರೆ ಹೋದರೆ, ಸುದೀಪ್ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇವರ ಮಧ್ಯೆ ಮೂಡಿರುವ ಮನಸ್ತಾಪವನ್ನು ಪರಿಹರಿಸಲು ರವಿಚಂದ್ರನ್ ಮುಂದಾಗಿದ್ದಾರೆ. ‘ನಾನು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿಯವರೆಗೆ ಎಲ್ಲರೂ ಶಾಂತರಾಗಿರಿ. ನನ್ನ-ಸುದೀಪ್ ಮಧ್ಯೆ ತಂದಿಡಬೇಡಿ’ ಎಂದು ರವಿಚಂದ್ರನ್ ಕೋರಿದ್ದಾರೆ.
ಸುದೀಪ್ (Sudeep) ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ನಿರ್ಮಾಪಕರ ಸಂಘದ ಪದಾಧಿಕಾರಿಗಳು ರವಿಚಂದ್ರನ್ ಅವರನ್ನು ಭೇಟಿ ಮಾಡಿದ್ದರು. ಇಂದು ಸ್ವತಃ ನಿರ್ಮಾಪಕ ಕುಮಾರ್ (N. Kumar) ಅವರೇ ರವಿಚಂದ್ರನ್ (Ravichandran) ಅವರನ್ನು ಭೇಟಿ ಮಾಡಿ, ಸುದೀಪ್ ಮತ್ತು ತಮ್ಮ ನಡುವಿನ ಸಂಗತಿಯನ್ನು ತಿಳಿಸಿದ್ದಾರೆ. ತಮಗೆ ನ್ಯಾಯ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.