ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮಾನವ- ಆನೆ ನಡುವಿನ ಸಂಘರ್ಷದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ವರ್ಷದ ಜುಲೈ 14 ರವರೆಗೆ 239 ಆನೆಗಳ ಹತ್ಯೆ ನಡೆದಿದೆ. ಪ್ರತಿ ದಿನ ಸರಾಸರಿ ಒಂದಕ್ಕಿಂತಲೂ ಹೆಚ್ಚು ಆನೆಗಳು ಬಲಿಯಾಗಿವೆ ಎಂದು ಸರ್ಕಾರದ ಹೊಸ ಮಾಹಿತಿಯೊಂದನ್ನು ನೀಡಿದೆ.
ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ವಿಭಾಗವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 74 ಆನೆಗಳು ಪತ್ತೆಯಾಗದ ಕಾರಣಗಳಿಂದ ಸಾವನ್ನಪ್ಪಿವೆ. 49 ಆನೆಗಳು ಗುಂಡೇಟಿಗೆ ಬಲಿಯಾಗಿವೆ. 36 ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿವೆ ಎಂದು ಎಕಾನಮಿ ನೆಕ್ಸ್ಟ್ ನ್ಯೂಸ್ ಪೋರ್ಟಲ್ ಬುಧವಾರ ವರದಿ ಮಾಡಿದೆ.
ಅನುರಾಧಪುರ ಜಿಲ್ಲೆಯೊಂದರಲ್ಲೇ 47 ಆನೆಗಳು ಮತ್ತು ಇದರ ನೆರೆಯ ಜಿಲ್ಲೆ ಪೊಲ್ಲನ್ನರುವಾದಲ್ಲಿ 46 ಆನೆಗಳು ಬಲಿಯಾಗಿವೆ ಎಂದು ಅದು ಹೇಳಿದೆ.